ನವದೆಹಲಿ : ಪ್ರಸ್ತಾವಿತ ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕೆಂಬ ವ್ಯಾಪಕ ಪ್ರತಿಭಟನೆಗಳು ಮತ್ತು ಬೇಡಿಕೆಗಳ ಮಧ್ಯೆ, ಲೋಕಸಭೆಯು ಮಂಗಳವಾರ ಮಸೂದೆ ಅಂಗೀಕಾರವಾಗಿದೆ.
ಲೋಕಸಭಾ ಸಚಿವಾಲಯ ಹೊರಡಿಸಿದ ಕಾರ್ಯಕಲಾಪಗಳ ಪಟ್ಟಿಯ ಪ್ರಕಾರ, ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್ ಅವರು ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನ ಅಂಗೀಕಾರಕ್ಕಾಗಿ ಮಂಡಿಸಲಿದ್ದಾರೆ.
ಮಸೂದೆಯಲ್ಲಿನ ಪ್ರಸ್ತಾವಿತ ಬದಲಾವಣೆಗಳು ದೇಶಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿದ್ದು, ಟ್ರಾನ್ಸ್ಜೆಂಡರ್ ಹಕ್ಕುಗಳ ಕಾರ್ಯಕರ್ತರು ಮತ್ತು ಟ್ರಾನ್ಸ್ ಸಮುದಾಯದ ಸದಸ್ಯರು ಇದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಇದನ್ನು ‘ತಾರತಮ್ಯ’ ಎಂದು ಕರೆದಿದ್ದಾರೆ.
ಮಾರ್ಚ್ 13ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಲೋಕಸಭೆಯಲ್ಲಿ ಪರಿಚಯಿಸಿದ ಈ ಮಸೂದೆಯು ‘ಟ್ರಾನ್ಸ್ಜೆಂಡರ್’ ಪದದ ನಿಖರವಾದ ವ್ಯಾಖ್ಯಾನವನ್ನು ನೀಡಲು ಮತ್ತು ‘ವಿಭಿನ್ನ ಲೈಂಗಿಕ ದೃಷ್ಟಿಕೋನಗಳು ಮತ್ತು ಸ್ವಯಂ-ಗ್ರಹಿಸಿದ ಲೈಂಗಿಕ ಗುರುತುಗಳನ್ನು’ ಪ್ರಸ್ತಾವಿತ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲು ಪ್ರಯತ್ನಿಸುತ್ತದೆ.








