ಬೆಂಗಳೂರು : ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಇಂದು ಕಂದಾಯ ಸಚಿವ ಕೃಷ್ಣಭೇರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.
* ಪೂರ್ವ ಮುಂಗಾರಿನಲ್ಲಿ 17 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ, 5 ಜಿಲ್ಲೆಗಳಲ್ಲಿ ಅಧಿಕ ಮಳೆ, 6 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದರೆ, 3 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ.
* ಪ್ರಸ್ತುತ ವರ್ಷ ಜೂನ್ ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಆಗಲಿದೆ.
* ತದನಂತರ ಮಳೆ ಕೊರತೆ ಎದುರಾಗುವ ಸಾಧ್ಯತೆ ಇದೆ.
* ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆ ಕೊರತೆಯಾಗಲಿದೆ.
* ಈ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ.
* ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಲಿದೆ.
* ಮುಂಬರುವ ತಿಂಗಳು ಲಾ ನಿನಾ ಪರಿಸ್ಥಿತಿ ತಟಸ್ಥವಾಗುವ ನಿರೀಕ್ಷೆ ಇದೆ.
* 2026ರ ಮೇ-ಜುಲೈ ವರೆಗೆ ಲಾ ನಿನಾ ತಟಸ್ಥವಾಗಿ ಮುಂದುವರೆಯುವ ಸಾಧ್ಯತೆ.
* 2026ರ ಜೂನ್ ಆಗಸ್ಟ್ ಅವಧಿಗೆ ಲಾ ನಿನಾ ಪರಿಸ್ಥಿತಿ ತಲೆದೋರಲಿದ್ದು, ವರ್ಷಾಂತ್ಯದ ವರೆಗೆ ಮುಂದುವರೆಯಲಿದೆ.
* ಪ್ರತಿವರ್ಷ ಸರಾಸರಿ 60 ರಿಂದ 70 ಸಾವು ಸಿಡಿಲಿನಿಂದ ಉಂಟಾಗುತ್ತಿದೆ.
* ಸಿಡಿಲಿನ ಸಂದರ್ಭದಲ್ಲಿ ಜನ ಏನು ಮಾಡಬೇಕು ಮಾಡಬಾರದು ಎಂದು ಸಣ್ಣ ವಿಡಿಯೋ ಮೂಲಕ ಜನರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ.
* ಬಾಕಿ ಬೆಳೆಹಾನಿ ಪರಿಹಾರ ಶೀಘ್ರ ವಿತರಿಸಲು ಸೂಚನೆ.
* ಬೇಸಿಗೆಯಲ್ಲಿ 207 ತಾಲೂಕುಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ.
* ಈ ಪೈಕಿ 60 ತಾಲೂಕುಗಳು ಈಗಾಗಲೇ ನೀರಿನ ಕೊರತೆ ಎದುರಿಸುತ್ತಿದೆ.
* ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ.
* ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಖಡಕ್ ಸೂಚನೆ.
* 2025-26 ರ ಅವಧಿಯಲ್ಲಿ ಮಲೆನಾಡು ಕರಾವಳಿ ಭಾಗದಲ್ಲಿ ಭೂ ಕುಸಿತ ಉಪಶಮನ ಕಾಮಗಾರಿಗಳಿಗಾಗಿ ಅಂದಾಜು ರೂ. 466.63 ಕೋಟಿ ವೆಚ್ಚದಲ್ಲಿ ಯೋಜನೆ.
* ಸಮುದ್ರ ಕೊರತೆ ಉಪಶಮನಕ್ಕೆ ರೂ.198.88 ಕೋಟಿ ಹಣ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ.
* ರಾಜ್ಯ ಸರ್ಕಾರ 2025 ನವೆಂಬರ್ 17ನೇ ತಾರೀಖು ಭಾರತ ಸರ್ಕಾರಕ್ಕೆ ಎರಡು ಜ್ಞಾಪನ ಪತ್ರಗಳನ್ನು ಸಲ್ಲಿಸಲಾಗಿದೆ.
* ಪರಿಹಾರವಾಗಿ ಬೆಳೆ ಇನ್ಪುಟ್ ಸಬ್ಸಿಡಿಗಾಗಿ ರೂ.614.90 ಕೋಟಿ ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ “ಚೇತರಿಕೆ ಮತ್ತು ಪುನರ್ ನಿರ್ಮಾಣ ಅಡಿಯಲ್ಲಿ ರೂ.1521.67 ಕೋಟಿ ಕೋರಲಾಗಿದೆ.
* IMCT ತಂಡ 2026ರ ಜನವರಿ 11 ರಿಂದ 13 ರವರೆಗೆ ಕರ್ನಾಟಕಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದೆ.
ಮಳೆ ಕೊರತೆ ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳು
* ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಪ್ತಾಹಿಕ ಮಳೆಯ ಮೇಲ್ವಿಚಾರಣೆ.
* ಜಿಲ್ಲಾವಾರು ಬೆಳೆ ಆಕಸ್ಮಿಕ ಯೋಜನೆಗಳನ್ನು ಮತ್ತು ಬರ ನಿರೋಧಕ ಬಿತ್ತನೆ ಬೀಜದ ತಳಿಗಳನ್ನು ಅಭಿವೃದ್ಧಿಪಡಿಸುವುದು.
* ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಆದ್ಯತೆಯ ಮೇರೆಗೆ ಕಾಯ್ದಿರಿಸುವುದು.
* ನರೇಗಾ ಯೋಜನೆಯಡಿ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡುವುದು.
* ಮೇವು ಲಭ್ಯತೆ ಬಗ್ಗೆ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಮೇವಿನ ಕೊರತೆಗಾಗಿ ಆಕಸ್ಮಿಕ ಯೋಜನೆಗಳನ್ನು ಸಿದ್ದಪಡಿಸುವುದು.








