ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಇನ್ನು ಮುಂದೆ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಲು ಪಂಚಾಯಿತಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಈಗ ನೇರವಾಗಿ ನಿಮ್ಮ ಮೊಬೈಲ್‌ನಲ್ಲಿರುವ UPI ಆಪ್‌ಗಳ ಮೂಲಕವೇ ಸುಲಭವಾಗಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ತೆರಿಗೆ ಪಾವತಿಸುವ ಸರಳ ಹಂತಗಳು ಇಲ್ಲಿವೆ:
UPI ಮೂಲಕ ತೆರಿಗೆ ಪಾವತಿಸುವುದು ಹೇಗೆ?
ಆಪ್ ತೆರೆಯಿರಿ: ನಿಮ್ಮ ಮೊಬೈಲ್‌ನಲ್ಲಿರುವ PhonePe, Google Pay, BHIM ಅಥವಾ Paytm ಆಪ್ ಅನ್ನು ಓಪನ್ ಮಾಡಿ.
ಸರ್ಚ್ ಮಾಡಿ: ಆಪ್‌ನಲ್ಲಿರುವ ‘Bills & Recharge’ ಅಥವಾ ‘Payments’ ವಿಭಾಗಕ್ಕೆ ಹೋಗಿ ‘RDPR (Bapuji Seva Kendra)’ ಎಂದು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
ಐಡಿ ದಾಖಲಿಸಿ: ನಿಮ್ಮ 18 ಅಂಕಿಯ ‘Property ID’ (ಪ್ರಾಪರ್ಟಿ ಐಡಿ) ಅನ್ನು ನಮೂದಿಸಿ ‘Proceed’ ನೀಡಿ. ಆಗ ತೆರಿಗೆ ಪಾವತಿದಾರರ ಹೆಸರು ಮತ್ತು ಬಾಕಿ ಇರುವ ಮೊತ್ತ ಪರದೆಯ ಮೇಲೆ ಕಾಣಿಸುತ್ತದೆ.
ಪಾವತಿ ಪೂರ್ಣಗೊಳಿಸಿ: ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ದುಕೊಂಡು, UPI PIN ನಮೂದಿಸುವ ಮೂಲಕ ಹಣ ಪಾವತಿಸಿ.
ಪಾವತಿ ರಸೀದಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ತೆರಿಗೆ ಪಾವತಿಸಿದ ನಂತರ ಅಧಿಕೃತ ರಸೀದಿಯನ್ನು ಆನ್‌ಲೈನ್ ಮೂಲಕವೇ ಪಡೆಯಬಹುದು:
ಬಾಪೂಜಿ ಸೇವಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ಗೆ https://bsk.karnataka.gov.in/BSK/cs/loadDownlodeReceipt ಭೇಟಿ ನೀಡಿ.
ವೆಬ್‌ಸೈಟ್‌ನಲ್ಲಿ ‘Service’ ಡ್ರಾಪ್-ಡೌನ್ ಮೆನುವಿನಲ್ಲಿ ‘Property Tax’ ಆಯ್ಕೆ ಮಾಡಿ.
ನಿಮ್ಮ 18 ಅಂಕಿಯ ಪ್ರಾಪರ್ಟಿ ಐಡಿ ದಾಖಲಿಸಿ ‘Search’ ಬಟನ್ ಕ್ಲಿಕ್ ಮಾಡಿ.
ತೆರಿಗೆ ಪಾವತಿಯ ವಿವರಗಳು ಕಾಣಿಸಿದಾಗ, ಕೊನೆಯಲ್ಲಿರುವ ‘Action’ ವಿಭಾಗದಲ್ಲಿ ‘Download’ ಬಟನ್ ಒತ್ತುವ ಮೂಲಕ PDF ರಸೀದಿಯನ್ನು ಪಡೆದುಕೊಳ್ಳಬಹುದು.
ಗಮನಿಸಿ: ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಸಮಯ ಉಳಿತಾಯ ಮಾಡಬಹುದು ಮತ್ತು ಪಾರದರ್ಶಕವಾಗಿ ತೆರಿಗೆ ಪಾವತಿಸಬಹುದು ಎಂದು ಇಲಾಖೆ ತಿಳಿಸಿದೆ.








