ಬೆಂಗಳೂರು: ಮುಂಬರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (GBA) 5 ಪಾಲಿಕೆಗಳ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಾಲಿಕೆವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳ ತಂಡವನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ತಂಡದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಪ್ರಮುಖ ರಾಜ್ಯ ನಾಯಕರನ್ನು ಒಳಗೊಂಡ ಬಲಿಷ್ಠ ಪಡೆಯನ್ನು ರಚಿಸಲಾಗಿದೆ.
1. ಚುನಾವಣಾ ಉಸ್ತುವಾರಿ ರಾಜ್ಯ ತಂಡ (ಪ್ರಮುಖ ನಾಯಕರು):
ಚುನಾವಣಾ ತಂತ್ರ ರೂಪಿಸಲು ರಾಜ್ಯ ಮಟ್ಟದ ಪ್ರಬಲ ತಂಡವನ್ನು ರಚಿಸಲಾಗಿದ್ದು, ಇದರಲ್ಲಿ ಈ ಕೆಳಗಿನ ನಾಯಕರಿದ್ದಾರೆ:
-
ಬಿ.ವೈ. ವಿಜಯೇಂದ್ರ (ರಾಜ್ಯಾಧ್ಯಕ್ಷರು)
-
ಆರ್. ಅಶೋಕ್ (ವಿರೋಧ ಪಕ್ಷದ ನಾಯಕರು, ವಿಧಾನಸಭೆ)
-
ಛಲವಾದಿ ನಾರಾಯಣಸ್ವಾಮಿ (ವಿರೋಧ ಪಕ್ಷದ ನಾಯಕರು, ವಿಧಾನಪರಿಷತ್)
-
ವಿ. ಸೋಮಣ್ಣ (ಕೇಂದ್ರ ಸಚಿವರು)
-
ಶೋಭಾ ಕರಂದ್ಲಾಜೆ (ಕೇಂದ್ರ ಸಚಿವರು)
-
ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ ನಾರಾಯಣ (ಶಾಸಕರು)
-
ಪಿ.ಸಿ. ಮೋಹನ, ಡಾ. ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಡಾ. ಕೆ. ಸುಧಾಕರ್ (ಸಂಸದರು)
2. ಪಾಲಿಕೆವಾರು ಉಸ್ತುವಾರಿಗಳ ವಿವರ:
-
ಬೆಂಗಳೂರು ಪಶ್ಚಿಮ ಪಾಲಿಕೆ: ಆರ್. ಅಶೋಕ್, ಎಸ್. ಸುರೇಶ್ ಕುಮಾರ್, ಡಾ. ಅಶ್ವತ್ ನಾರಾಯಣ, ಗೋಪಾಲಯ್ಯ, ಮುನಿರತ್ನ, ರವಿ ಸುಬ್ರಮಣ್ಯ ಮತ್ತು ಮಾಳವಿಕಾ ಅವಿನಾಶ್.
-
ಬೆಂಗಳೂರು ಉತ್ತರ ಪಾಲಿಕೆ: ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ತಮ್ಮೇಶ್ ಗೌಡ, ಭಾರತಿ ಶೆಟ್ಟಿ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು.
-
ಬೆಂಗಳೂರು ಪೂರ್ವ ಪಾಲಿಕೆ: ಬೈರತಿ ಬಸವರಾಜ್, ಮಂಜುಳಾ ಅರವಿಂದ್ ಲಿಂಬಾವಳಿ, ಎನ್. ರವಿಕುಮಾರ್ ಮತ್ತು ನಂದೀಶ್ ರೆಡ್ಡಿ.
-
ಬೆಂಗಳೂರು ದಕ್ಷಿಣ ಪಾಲಿಕೆ: ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ ಮತ್ತು ಪೂರ್ಣಿಮಾ ಪ್ರಕಾಶ್.
-
ಬೆಂಗಳೂರು ಕೇಂದ್ರ ಪಾಲಿಕೆ: ಸಿ.ಟಿ. ರವಿ, ಎಸ್. ರಘು, ಸಿ.ಕೆ. ರಾಮಮೂರ್ತಿ, ಉದಯ್ ಗರುಡಾಚಾರ್ ಮತ್ತು ಸಪ್ತಗಿರಿಗೌಡ.
3. ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳ ಪಟ್ಟಿ (ಕೆಲವು ಪ್ರಮುಖ ಕ್ಷೇತ್ರಗಳು):
| ವಿಧಾನಸಭಾ ಕ್ಷೇತ್ರ | ಉಸ್ತುವಾರಿಗಳ ಹೆಸರು |
| ಯಲಹಂಕ | ಎಸ್.ಆರ್. ವಿಶ್ವನಾಥ್ |
| ಪದ್ಮನಾಭನಗರ | ಆರ್. ಅಶೋಕ್ |
| ಮಲ್ಲೇಶ್ವರಂ | ಡಾ. ಸಿ.ಎನ್. ಅಶ್ವತ್‌ನಾರಾಯಣ |
| ರಾಜಾಜಿನಗರ | ಎಸ್. ಸುರೇಶ್‌ಕುಮಾರ್ |
| ಕೆ.ಆರ್. ಪುರಂ | ಬೈರತಿ ಬಸವರಾಜ್ |
| ಮಹಾಲಕ್ಷ್ಮಿ ಲೇಔಟ್ | ಗೋಪಾಲಯ್ಯ |
| ಬಸವನಗುಡಿ | ರವಿ ಸುಬ್ರಹ್ಮಣ್ಯ |
| ಜಯನಗರ | ಸಿ.ಕೆ. ರಾಮಮೂರ್ತಿ |
| ಬ್ಯಾಟರಾಯನಪುರ | ಎಂ.ಟಿ.ಬಿ. ನಾಗರಾಜ್ |
| ವಿಜಯನಗರ | ಸುರೇಶ್ ಗೌಡ (ತುಮಕೂರು) |
| ಗೋವಿಂದರಾಜನಗರ | ಕೆ.ಎಸ್. ನವೀನ್ |
| ಚಾಮರಾಜಪೇಟೆ | ಜಿ. ಮಂಜುನಾಥ್ |
ಇನ್ನೇರಡು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ, ಬಿಜೆಪಿಯು ಈಗಿನಿಂದಲೇ ತನ್ನ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಪಕ್ಷದ ಹಿಡಿತ ಸಾಧಿಸಲು ಸ್ಥಳೀಯ ಶಾಸಕರು ಮತ್ತು ಮಾಜಿ ಶಾಸಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಎಲ್‌ಪಿಜಿ ಬಿಕ್ಕಟ್ಟು ಶಮನದತ್ತ: ಹಾರ್ಮುಜ್ ಜಲಸಂಧಿ ದಾಟಲು ಸಜ್ಜಾದ ಮತ್ತೆರಡು ಭಾರತೀಯ ಅನಿಲ ಟ್ಯಾಂಕರ್!
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








