ಯಾದಗಿರಿ : ಯಾದಗಿರಿಯಲ್ಲಿ ಭೀಕರ ಮರ್ಡರ್ ನಡೆದಿದ್ದು, ಪತಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಯಾದಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ಈ ಒಂದು ಕೊಲೆ ನಡೆದಿದೆ.
ಚಾಮನಹಳ್ಳಿ ತಾಂಡಾ ನಿವಾಸಿ ಸಾಗರ ರಾಠೋಡ್ (30)ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಸಾಗರ ರಾಥೋಡ್ ಪತ್ನಿಯ ಪ್ರಿಯಕರ ರೆಡ್ಡಿ ರಾಠೋಡ್ ನಿಂದ ಈ ಒಂದು ಕೃತ್ಯ ನಡೆದಿದೆ. ಸಾಗರ್ ಪತ್ನಿಯ ಜೊತೆಗೆ ರೆಡ್ಡಿ ಅನೈತಿಕ ಸಂಬಂಧ ಹೊಂದಿದ್ದ ಇದನ್ನು ಪ್ರಶ್ನಿಸಿದಕ್ಕೆ ರೆಡ್ಡಿ ರಾಠೋಡ್ ಸಾಗರ್ನನ್ನು ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣದ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








