ಸೈಬರ್ ವಂಚಕರು 94 ವರ್ಷದ ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ನಿವೃತ್ತ ಸಂಶೋಧಕನಿಗೆ ಸೈಬರ್ ವಂಚಕರು ಭಾರಿ ವಂಚನೆ ಎಸಗಿದ್ದಾರೆ. ಲ್ಯಾಂಡ್ ಲೈನ್ ಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ.
ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಕೆಎಸ್ ದಾಖಲಾಗಿದೆ. ಇನ್ಸ್ಪೆಕ್ಟರ್ ಕರೆ ಮಾಡುತ್ತಾರೆ ಎಂದು ಕಾಲ್ ಕಟ್ ಮಾಡಿದ್ದ. ಬಳಿಕ ಸಂದೀಪ್ ರಾವ್ ಹೆಸರಿನಲ್ಲಿ ವೃದ್ಧನಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಸಿಬಿಐ ಅಧಿಕಾರಿ ಎಂದು ಆಧಾರ್ ಕಾರ್ಡ್ ವಾಟ್ಸಪ್ಪ್ ಮಾಡಿಸಿಕೊಂಡಿದ್ದ. ವೃದ್ಧರ ಮೊಬೈಲ್ ನಂಬರ್ ಗೆ ನಕಲಿ ಎಫ್ಐಆರ್ ಕಳುಹಿಸಿದ್ದ ಆರೋಪಿ ನಂತರ ಸಿ ಬಿ ಐ ಪೊಲೀಸರ ರೀತಿ ಡ್ರೆಸ್ ಹಾಕಿ ವಿಡಿಯೋ ಕಾಲ್ ಮಾಡಿದ್ದಾನೆ.
ನಾವು ಹೇಳಿದಂತೆ ಕೇಳಬೇಕು ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಕೇಸ್ ಕೈ ಬಿಡಲು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಡಿಸೆಂಬರ್ 17 ರಿಂದ ಫೆಬ್ರಮರಿ 23ರ ವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. 4.91 ಕೋಟಿ ರೂಪಾಯಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇನ್ನು ಹೆಚ್ಚಿನ ಹಣ ಕೇಳಿದಾಗ ವಿರುದ್ಧ ಪೊಲೀಸರ ಮೊರೆ ಹೋಗಿದ್ದಾರೆ. ಬಳಿಕ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಗೆ ವೃದ್ಧನಿಂದ ದೂರು ಬಂದಿದ್ದು ಕೇಸ್ ದಾಖಲಿಸಿ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








