ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದೆ ಸಾಗುತ್ತಿವೆಯೇ ಎಂಬ ಆತಂಕ ಮೂಡುತ್ತಿದೆ. ಕಳೆದ ನಾಲ್ಕು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,072 ಅತ್ಯಾಚಾರ ಹಾಗೂ 18,834 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಅತ್ಯಂತ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ವರ್ಷವಾರು ದೌರ್ಜನ್ಯದ ಅಂಕಿಅಂಶಗಳು
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕೇವಲ ದೈಹಿಕ ಹಿಂಸೆಗೆ ಸೀಮಿತವಾಗಿಲ್ಲ; ವರದಕ್ಷಿಣೆ ಸಾವು ಮತ್ತು ಕೌಟುಂಬಿಕ ಹಿಂಸೆಗಳು ಸಹ ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.
| ವರ್ಷ | ಅತ್ಯಾಚಾರ | ಲೈಂಗಿಕ ಕಿರುಕುಳ | ವರದಕ್ಷಿಣೆ ಸಾವು | ಕೌಟುಂಬಿಕ ಹಿಂಸೆ |
| 2023 | 600 | 6,489 | 158 | 2,946 |
| 2024 | 720 | 6,334 | 112 | 2,894 |
| 2025 | 678 | 5,853 | 114 | 2,771 |
| 2026 (ಈವರೆಗೆ) | 74 | 158 | 16 |








