ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸತತ 8,931 ದಿನಗಳ ಕಾಲ ಸರ್ಕಾರಿ ಮುಖ್ಯಸ್ಥರಾಗಿ (ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ) ಸೇವೆ ಸಲ್ಲಿಸುವ ಮೂಲಕ ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಮೂಲಕ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ ಹೆಸರಲ್ಲಿದ್ದ (8,930 ದಿನಗಳು) ದಾಖಲೆಯನ್ನು ಮೋದಿ ಮುರಿದಿದ್ದಾರೆ.
ಈ ಐತಿಹಾಸಿಕ ಸಾಧನೆಯನ್ನು ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಕೊಂಡಾಡಿದ್ದಾರೆ.
ಅಕ್ಟೋಬರ್ 7, 2001 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ, ಅಂದಿನಿಂದ ಇಂದಿನವರೆಗೆ ಒಂದು ದಿನವೂ ರಜೆ ಪಡೆಯದೆ ಸತತವಾಗಿ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಈಗ ಅವರು ಸರ್ಕಾರಿ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಚಾಮ್ಲಿಂಗ್ ದಾಖಲೆ ಪತನ: ಈ ಹಿಂದೆ ಸಿಕ್ಕಿಂನ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಅವರು 8,930 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದೇಶದ ದೀರ್ಘಾವಧಿಯ ಚುನಾಯಿತ ಮುಖ್ಯಸ್ಥರಾಗಿದ್ದರು. ಈಗ ಮೋದಿ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.
:
“ಇದು ಕೇವಲ ದಾಖಲೆಯಲ್ಲ, ಸೇವೆಯ ಸಂಕಲ್ಪ. ಮೋದಿ ಅವರ ‘ರಾಷ್ಟ್ರ ಮೊದಲು’ ಎಂಬ ನೀತಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದಿದೆ” ಎಂದು ಗೃಹ ಸಚಿವರು ಶ್ಲಾಘಿಸಿದ್ದಾರೆ.
ರಾಜನಾಥ್ ಸಿಂಗ್: “ನಿರಂತರ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಸಂದ ಜಯವಿದು” ಎಂದು ರಕ್ಷಣಾ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಸಚಿವರಾದ ಪಿಯೂಷ್ ಗೋಯಲ್, ಕಿರಣ್ ರಿಜಿಜು ಸೇರಿದಂತೆ ಹಲವರು ‘ಮೋದಿ ಯುಗ’ದ ಸಾಧನೆಗಳನ್ನು ಸ್ಮರಿಸಿದ್ದಾರೆ.








