Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

23/03/2026 5:58 AM

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ
KARNATAKA

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

By kannadanewsnow5723/03/2026 5:58 AM

ಬೆಂಗಳೂರು: ವಾಹನ ಅಪಘಾತದಲ್ಲಿ ಯಾವುದೇ ತಪ್ಪು ಇಲ್ಲದಿದ್ದರೂ (No-Fault Liability) ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ-2019ರ ಸೆಕ್ಷನ್ 164 ರ ಅನ್ವಯ, ಆದಾಯದ ಮಿತಿಯ ನಿರ್ಬಂಧವಿಲ್ಲದೆ ಈ ಪರಿಹಾರ ಒದಗಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

2014ರ ಏಪ್ರಿಲ್ 17ರಂದು ರಂಜಾನ್ ಹುಸೇನ್ ಕಲ್ಲೋಳೆ ಮತ್ತು ರವಿ ಮಹದೇವ್ ಮಗದುಮ್ ಅವರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ಎಮ್ಮೆ ಬಂದಿತ್ತು. ಎಮ್ಮೆಯನ್ನು ತಪ್ಪಿಸಲು ಹೋಗಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಮೃತಪಟ್ಟಿದ್ದರು.

ಈ ಹಿಂದೆ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೈಮು ನ್ಯಾಯಾಧಿಕರಣವು (MACT), ಮೃತ ರಂಜಾನ್ ಅವರ ವಾರ್ಷಿಕ ಆದಾಯ ₹40 ಸಾವಿರಕ್ಕಿಂತ ಹೆಚ್ಚಿದೆ ಎಂಬ ತಾಂತ್ರಿಕ ಕಾರಣ ನೀಡಿ ಪರಿಹಾರವನ್ನು ನಿರಾಕರಿಸಿತ್ತು. ಅಲ್ಲದೆ, ಸವಾರನ ಬಳಿ ಚಾಲನಾ ಪರವಾನಗಿ ಇಲ್ಲ ಎಂಬ ಕಾರಣಕ್ಕೆ ಬೈಕ್ ಮಾಲೀಕನೇ ಪರಿಹಾರ ನೀಡಬೇಕೆಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಮೃತರ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠವು ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿ ತೀರ್ಪು ನೀಡಿದೆ:

ಆದಾಯದ ಮಿತಿ ಅನ್ವಯಿಸುವುದಿಲ್ಲ

ಸೆಕ್ಷನ್ 164ರ ಅಡಿ ಅಪಘಾತದಲ್ಲಿ ಮೃತಪಟ್ಟವರಿಗೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಇಲ್ಲಿ ಆದಾಯದ ಮಿತಿಯನ್ನು ಪರಿಗಣಿಸುವುದು ಕಾನೂನುಬಾಹಿರ.

ವಿಮಾ ಕಂಪನಿಯ ಹೊಣೆ

ಸವಾರನ ಬಳಿ ಪರವಾನಗಿ ಇರಲಿಲ್ಲ ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ವಿಮಾ ಕಂಪನಿಯೇ ಶೇ. 9ರಷ್ಟು ಬಡ್ಡಿಯೊಂದಿಗೆ ₹5 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಈ ತೀರ್ಪು ಅಪಘಾತದ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಶಾದಾಯಕವಾಗಿದೆ. ಅಪಘಾತದಲ್ಲಿ ನಿರ್ಲಕ್ಷ್ಯ ಸಾಬೀತುಪಡಿಸುವ ಅಗತ್ಯವಿಲ್ಲದೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶೀಘ್ರವಾಗಿ ಆರ್ಥಿಕ ನೆರವು ಸಿಗಲು ಇದು ಸಹಕಾರಿಯಾಗಲಿದೆ.

BIG NEWS: Rs. 5 lakh compensation mandatory for a person who dies in an accident through no fault of his own: High Court's important order
Share. Facebook Twitter LinkedIn WhatsApp Email

Related Posts

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM2 Mins Read

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM1 Min Read

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM1 Min Read
Recent News

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

23/03/2026 5:58 AM

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM
State News
KARNATAKA

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

By kannadanewsnow5723/03/2026 6:00 AM KARNATAKA 2 Mins Read

ಬೆಂಗಳೂರು: ಇಂದಿನ ವೇಗದ ಜೀವನಶೈಲಿ, ಬದಲಾದ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದಾಗಿ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ…

BIG NEWS : ಅಪಘಾತದಲ್ಲಿ ತಪ್ಪಿಲ್ಲದೆ ಸಾವನ್ನಪ್ಪಿದ ವ್ಯಕ್ತಿಗೆ 5 ಲಕ್ಷ ರೂ. ಪರಿಹಾರ ನೀಡುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ಆದೇಶ

23/03/2026 5:58 AM

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.