ದಕ್ಷಿಣಕನ್ನಡ : ಮೂಡಬಿದರೆ ಇನ್ಸ್ಪೆಕ್ಟರ್ ಸಂದೇಶನ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಾಗಿದೆ.
ಅತ್ಯಾಚಾರ ಆರೋಪದ ಅಡಿ ಪೊಲೀಸರು ಇದೀಗ ಸಂದೇಶ ವಿರುದ್ಧ FIR ದಾಖಲಾಗಿದ್ದು, ಸಂತ್ರಸ್ತೇ ಶಿಕ್ಷಕಿ ನೀಡಿದ ದೂರಿನ ಮೇರೆಗೆ fir ದಾಖಲಾಗಿದೆ. 2018 ರಿಂದ 2023ರ ವರೆಗೆ ಬೆದರಿಸಿ ಸಂದೇಶ ಅತ್ಯಾಚಾರ ಎಸೆಗಿದ್ದಾನೆ ಎಂದು ಸಂತ್ರಸ್ತ ಶಿಕ್ಷಕಿ ಆರೋಪಿಸಿದ್ದಾರೆ. ಶಿಕ್ಷಕಿ ಮನೆಗೆ ಹೋಗಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನೇ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.








