ದಾವಣಗೆರೆ : ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ. ಕಡದಕಟ್ಟೆ ಗ್ರಾಮದ ನಿವಾಸಿ ಕಾರ್ತಿಕ್ (23) ಮೃತ ದುರದೇವಿ ಎಂದು ತಿಳಿದುಬಂದಿದೆ.
ಯುಗಾದಿ ಬಳಿಕ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ್ ಜಾತ್ರೆಗೆ ಹೋಗಿದ್ದ. ಗೋವಿನಕೋವಿ ಗ್ರಾಮದ ಬಳಿ ಇರುವ ಗೆಡ್ಡೆ ರಾಮೇಶ್ವರ ಪುಣ್ಯಕ್ಷೇತ್ರಕ್ಕೆ ಹೋಗಿದ್ದ ಈ ವೇಳೆ ನದಿಯಲ್ಲಿ ಸ್ನಾನಕ್ಕೆ ಎಂದು ಇಳಿದಾಗ ನೀರಿನಲ್ಲಿ ಮುಳುಗಿ ಕಾರ್ತಿಕ್ ಸಾವನಪ್ಪಿದ್ದಾನೆ. ನದಿಯಿಂದ ಕಾರ್ತಿಕ್ ಮೃತದೇಹವನ್ನ ಅಗ್ನಿಶಾಮಕ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








