ಬೆಂಗಳೂರು : 2026 ಐಪಿಎಲ್ ಹಬ್ಬಕ್ಕೆ ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಮಾರ್ಚ್ 28ರಂದು ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಹಾಗೂ ಹೈದರಾಬಾದ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಕಳೆದ ವರ್ಷ ಕಾಲ್ತುಳಿತ ಘಟನೆ ಸಂಭವಿಸಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೂ ಯಾವುದೇ ಪಂದ್ಯ ನಡೆಸಿಲ್ಲ. ಆ ಒಂದು ಘಟನೆ ಆದ ಬಳಿಕ ಫ್ರಾಂಚೈಸಿ ಎಚ್ಚೆತ್ತುಕೊಂಡಿದ್ದು, 35,000 ಸೀಟ್ ಸಾಮರ್ಥವಿದ್ದರೂ ಬಫರ್ ಜೋನ್ ನಿಗದಿ ಮಾಡಲಾಗಿದೆ. ಜನದಟ್ಟಣೆ ಪತ್ತೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲಾಗುತ್ತಿದೆ.
ಜನದಟ್ಟಣೆ ಕಂಡ ಕೂಡಲೇ ಬೋರ್ಡಿಂಗ್ ಪ್ರದೇಶ ಬಂದ್ ಮಾಡಲಾಗುತ್ತದೆ. ತುರ್ತು ಚಿಕಿತ್ಸೆಗೆ ಸ್ಟೇಡಿಯಂ ಬಳಿ 8 ಆಂಬುಲೆನ್ಸ್ ಲಭ್ಯವಿರುತ್ತದೆ. 25,000 ಜನರಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬುಲೆನ್ಸ್ ಇರಲಿದೆ. 35 ಸೀಟ್ ಸಾಮರ್ಥ್ಯ ಇದ್ದರೂ ಕೂಡ 28,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರಲಿದೆ.








