ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿರುವ ಬೆನ್ನಲ್ಲೇ, ಖದೀಮರು ಇದನ್ನೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆ ಮನೆಯ ಮುಂದೆ ಅಥವಾ ಕಾಂಪೌಂಡ್ ಒಳಗೆ ಇಟ್ಟಿದ್ದ ಸಿಲಿಂಡರ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಲಾಗುತ್ತಿದೆ.
ಈಗಾಗಲೇ ನಗರದ ಕಲ್ಯಾಣ ನಗರ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ವರದಿಯಾಗಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದೀಗ ಸಿಲಿಂಡರ್ ಅಭಾವ ಬೆನ್ನೆಲೆ ಬೆಂಗಳೂರಿನಲ್ಲಿ ಸಿಲಿಂಡರ್ ಕಳ್ಳತನ ನಡೆದಿದೆ.
ಯುಗಾದಿ ಹಬ್ಬದ ದಿನವೇ ಸಿಲಿಂಡರಿಗಳನ್ನು ಕಳ್ಳತನ ಮಾಡಲಾಗಿದೆ ಗ್ರಹ ಬಳಕೆಯ ಎಲ್ಲೆರಡು ಸಿಲಿಂಡರ್ ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ವಿಶ್ವಪ್ರಿಯ ಅಪಾರ್ಟ್ಮೆಂಟ್ನಲ್ಲಿ ಸಿಲಿಂಡರ್ ಗಳನ್ನು ಕಳ್ಳರು ಕದ್ದು ವೈದಿದ್ದಾರೆ. ಬೆಂಗಳೂರಿನ ಬೇಗೂರು ಬಳಿಯ ಅಪಾರ್ಟ್ಮೆಂಟ್ ನಲ್ಲಿ ಬೈಕ್ ನಲ್ಲಿ ಬಂದು ಹೆಲ್ಮೆಟ್ ಹಾಕಿಕೊಂಡು ಸಿಲಿಂಡರ್ ಸ್ಕೂಟಿ ಮೇಲೆ ಇಟ್ಟುಕೊಂಡು ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯುಗಾದಿ ಹಬ್ಬದ ದಿನವೇ ಈ ಒಂದು ಕಳ್ಳತನ ನಡೆದಿದ್ದು ಗ್ಯಾಸ್ ಸಿಲಿಂಡರ್ ಅಭಾವ ಎಷ್ಟಿದೆ ಎಂದು ಈ ಒಂದು ಕಳ್ಳತನದಿಂದಲೇ ಗೊತ್ತಾಗುತ್ತಿದೆ. ಇದೀಗ ಸಿಲಿಂಡರ್ ಓನರ್ ಕಳ್ಳತನ ನಡೆದಿರುವ ಕುರಿತು ಬೇಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








