Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಪ್ಪು ನಂಬರ್‌ಗೆ ಯುಪಿಐ (UPI) ಹಣ ಕಳುಹಿಸಿದ್ದೀರಾ? ಚಿಂತಿಸಬೇಡಿ, ಈ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಹಣ ಮರಳಿ ಪಡೆಯಿರಿ!

20/03/2026 3:02 PM

ಜಾಗತಿಕ ತೈಲ-ಅನಿಲ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಮುಂದಾದ ಭಾರತ ಸರ್ಕಾರ

20/03/2026 3:01 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; HP, ಇಂಡಿಯನ್ ಆಯಿಲ್ ಪ್ರೀಮಿಯಂ ‘ಪೆಟ್ರೋಲ್’ ದರ ಲೀಟರ್’ಗೆ 2 ರೂ. ಹೆಚ್ಚಳ |Petrol Price Hike

20/03/2026 2:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ
KARNATAKA

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

By kannadanewsnow0920/03/2026 2:59 PM

ಕಲಬುರ್ಗಿ: ಉಪ ಚುನಾವಣೆ ನಡೆಯುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಿಗೆ ಸಂಬಂಧಿಸಿ ನಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ್, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸ್ ಕರಿಯಪ್ಪ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಮತದಾರರೂ ಈ ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು, ಆ ನಿಟ್ಟಿನಲ್ಲಿ ಬಿಜೆಪಿ ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ ಎಂದು ನುಡಿದರು.

ಡಿನ್ನರ್ ರಾಜಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಆರೆಂಟು ತಿಂಗಳುಗಳಿಂದ ಆಡಳಿತ ಪಕ್ಷದ ಆಂತರಿಕ ಕಚ್ಚಾಟ, ಬೇಗುದಿಯನ್ನು ನಾವು ನೋಡುತ್ತಿದ್ದೇವೆ. ಅದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮೊನ್ನೆ ವಿಧಾನಸೌಧದಲ್ಲಿ ಆಡಳಿತ ಪಕ್ಷದ ಶಾಸಕರ ಜೊತೆ ಮಾತನಾಡಿದ ವೇಳೆ, ನಿಶ್ಚಿತವಾಗಿ ಒಂದು ಫಲಿತಾಂಶ ಬರಲಿದೆ; ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸದ ಮಾತನ್ನು ಅವರು ಆಡಿದ್ದಾರೆ. ಆದರೆ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದು ಯಕ್ಷಪ್ರಶ್ನೆ. ಅವರಿಂದಲೇ ಉತ್ತರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪಂಚಾಯತ್‍ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಕುರಿತು ಮೊನ್ನೆಯೂ ಸದನದಲ್ಲಿ ಒತ್ತಾಯ ಮಾಡಿದ್ದೇವೆ. ಪಂಚಾಯಿತಿಯಿಂದ ಸಂಸತ್ತಿನವರೆಗೆ ಕಲ್ಯಾಣ ಕರ್ನಾಟಕ ಯಾರ ಹಿಡಿತದಲ್ಲಿದೆ ಎಂಬುದು ನಿಮಗೆ ಗೊತ್ತಿದೆ. ಆದರೂ ಅಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಮತ್ತೊಂದು ಕಡೆ ಪಂಚಾಯತ್‍ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇದರ ಪರಿಣಾಮ ಏನೆಂದರೆ, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಕೇಂದ್ರದಿಂದ ಬರಬೇಕಾದ ಕನಿಷ್ಠ 14-15 ಸಾವಿರ ಕೋಟಿ ರೂ. ಬಂದಿಲ್ಲ. ರಾಜ್ಯ ಸರಕಾರದ ಧೋರಣೆ ರಾಜ್ಯದ ಹಿನ್ನಡೆಗೆ ಕಾರಣ ಆಗಿದೆ ಎಂದು ಸ್ಪಷ್ಟವಾಗಿದೆ ಎಂಬುದಾಗಿ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಇರುವ ಕಾರಣ ಪ್ರತಿವರ್ಷ 14-15 ಸಾವಿರ ಕೋಟಿ ರೂ. ಲುಕ್ಸಾನು ಆಗುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು. ಈಗಲಾದರೂ ದೇವರು ಬುದ್ಧಿ ಕೊಟ್ಟು ಚುನಾವಣೆಗೆ ರಾಜ್ಯ ಸರಕಾರ ಮುಂದಾಗಲಿ ಎಂದು ಆಶಿಸಿದರು.

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ

Share. Facebook Twitter LinkedIn WhatsApp Email

Related Posts

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

20/03/2026 2:53 PM1 Min Read

ಠಾಣೆಯಲ್ಲಿ ರಾಜಿ ಮಾಡಿಕೊಂಡರೂ ತಣಿಯದ ಕೋಪ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವಿವಾಹಿತೆಯ ಬರ್ಬರ ಹತ್ಯೆ!

20/03/2026 2:34 PM1 Min Read

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

20/03/2026 2:26 PM1 Min Read
Recent News

ತಪ್ಪು ನಂಬರ್‌ಗೆ ಯುಪಿಐ (UPI) ಹಣ ಕಳುಹಿಸಿದ್ದೀರಾ? ಚಿಂತಿಸಬೇಡಿ, ಈ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಹಣ ಮರಳಿ ಪಡೆಯಿರಿ!

20/03/2026 3:02 PM

ಜಾಗತಿಕ ತೈಲ-ಅನಿಲ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಮುಂದಾದ ಭಾರತ ಸರ್ಕಾರ

20/03/2026 3:01 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; HP, ಇಂಡಿಯನ್ ಆಯಿಲ್ ಪ್ರೀಮಿಯಂ ‘ಪೆಟ್ರೋಲ್’ ದರ ಲೀಟರ್’ಗೆ 2 ರೂ. ಹೆಚ್ಚಳ |Petrol Price Hike

20/03/2026 2:59 PM

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM
State News
KARNATAKA

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

By kannadanewsnow0920/03/2026 2:59 PM KARNATAKA 2 Mins Read

ಕಲಬುರ್ಗಿ: ಉಪ ಚುನಾವಣೆ ನಡೆಯುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯಾಧ್ಯಕ್ಷ…

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

20/03/2026 2:53 PM

ಠಾಣೆಯಲ್ಲಿ ರಾಜಿ ಮಾಡಿಕೊಂಡರೂ ತಣಿಯದ ಕೋಪ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವಿವಾಹಿತೆಯ ಬರ್ಬರ ಹತ್ಯೆ!

20/03/2026 2:34 PM

ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ

20/03/2026 2:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.