ಬೆಂಗಳೂರು : ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಮಹಿಳೆಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಂದ್ರ ಲೇಔಟ್ ಪೊಲೀಸ್ ಸರು ಆರೋಪಿ ಹಫೀಜ್ ನನ್ನ ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಡ್ಯಾಗರ್ ನಿಂದ ಇರಿದು ಫಿರ್ದೋಸ್ ಬಾನು ಎಂಬ ಮಹಿಳೆಯನ್ನು ಹಫೀಜ್ ಕೊಲೆ ಮಾಡಿದ್ದ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಹಫೀಜ್ ನನ್ನು ಚಂದ್ರಾ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆ ಆರೋಪಿಯನ್ನು ದೂರ ಮಾಡಿದ್ದೆ ಕೊಲೆಗೆ ಕಾರಣವಾಗಿದೆ.
ಫಿರ್ದೋಸ್ ಬಾನುಗೆ ಆರೋಪಿ ಆಫೀಸ್ ಜೊತೆ ಸಂಪರ್ಕ ಇತ್ತು. ಇಬ್ಬರು ಚೆನ್ನಾಗಿಯೇ ಇದ್ದರು.ಈ ವಿಚಾರ ಮಹಿಳೆ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಫಿರ್ದೋಸ್ ಕುಟುಂಬದವರು ಬುದ್ಧಿವಾದ ಹೇಳಿದ್ದಾರೆ. ಫೆಬ್ರವರಿ 28ರಂದು ಆರೋಪಿ ಆಫೀಸ್ ಮಹಿಳೆಯ ಜೊತೆಗೆ ಗಲಾಟೆ ಮಾಡಿದ್ದಾನೆ.ಗಲಾಟೆ ವಿಕೋಪಕ್ಕೆ ತಿರುಗಿ ಡ್ಯಾಗರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.








