ಶಿವಮೊಗ್ಗ : ನೀರಾನೆ ದಾಳಿಯಿಂದ ಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಹುಲಿ ಮತ್ತು ಸಿಂಹಾ ಸಫಾರಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸಾವನಪ್ಪಿದ್ದಾರೆ.
ಸಫಾರಿಯಲ್ಲಿ ಪಶುವೈದ್ಯಾಧಿಕಾರಿ ಸಮೀಕ್ಷೆ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10:30ಕ್ಕೆ ಮೃಗಾಲಯದ ಆಸ್ಪತ್ರೆಗೆ ಸಮೀಕ್ಷಾ ತೆರಳಿದ್ದಾರೆ. ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ರಾತ್ರಿ 11:45 ರ ಸುಮಾರಿಗೆ ನಿರಾನೆ ವೈದ್ಯೆ ಮೇಲೆ ದಾಳಿ ಮಾಡಿದೆ.
ಗರ್ಭಿಣಿ ನಿರಾಣಿ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಥರ್ಮಲ್ ಕ್ಯಾಮೆರಾ ಮೂಲಕ ವೈದ್ಯ ಆವರಣದ ಒಳಗಡೆ ಹೋಗಿದ್ದರು. ಇವಳೇ ನಿರಾಣಿ ದಾಳಿಯಿಂದ ಸಮಕ್ಷ ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಶಾಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇಂದು ಬೆಳಗ್ಗೆ 6:30 ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಮೀಕ್ಷಾ ಸಾವನಪ್ಪಿದ್ದಾರೆ.








