ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿರ್ಲಕ್ಷದಿಂದ ಪೀಣ್ಯ 2ನೇ ಹಂತ ಬಿಎಂಟಿಸಿ ಡಿಪೋಗೆ ಎಲೆಕ್ಟ್ರಿಕ್ ಬಸ್ ನುಗ್ಗಿದೆ. ಬಿಎಂಟಿಸಿ ಬಸ್ ನುಗ್ಗಿದ ಪರಿಣಾಮ ನಾಲ್ಕು ಬೈಕುಗಳು ಜಖಂಗೊಂಡಿವೆ.
ಡಿಪೋದ ಸಂಚಾರ ನಿಯಂತ್ರಿಕರ ಕೊಠಡಿಗೆ ಬಿಎಂಟಿಸಿ ಬಸ್ ನುಗ್ಗಿದೆ. ಹ್ಯಾಂಡ್ ಬ್ರೇಕ್ ಹಾಕದೆ ಚಾಲಕ ಬಸ್ ನಿಲ್ಲಿಸಿ ಹೋಗಿದ್ದ. KA 51 AK 4169 ನಂಬರ್ ನ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.








