ಬೆಂಗಳೂರು : ಕಾಂತಾರ ಭರ್ಜರಿ ಯಶಸ್ವಿ ಬಳಿಕ ಕಾಂತಾರ ಚಾಪ್ಟರ್ 1 ಸಹ ಭಾರಿ ಯಶಸ್ವಿ ಕಂಡಿತು. ಇದೀಗ ಅದೇ ಸಂಭ್ರಮದಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಭಿಮಾನಿಗಳ ತಲೆಗೆ ಮತ್ತೊಂದು ಹುಳ ಬಿಟ್ಟಿದ್ದಾರೆ.
ಹೌದು ಇನ್ಸ್ಟಾಗ್ರಾಮ್ ನಲ್ಲಿ ಯುಗಾದಿ ಹಬ್ಬ ಸಂಭ್ರಮದ ಮಧ್ಯೆ ಈ ಒಂದು ಪೋಸ್ಟ್ ಭಾರಿ ವೈರಲ್ ಆಗಿದೆ.ಬಿಳಿ ಬಣ್ಣದ ಬೋರ್ಡ್ನಲ್ಲಿ ಓಂ ಎಂದು ಆರಂಭದಲ್ಲಿ ಬರೆಯಲಾಗಿದೆ. ನಂತರ ಮಧ್ಯಭಾಗದಲ್ಲಿ ʻಅಧ್ಯಾಯ 2 ಇಲ್ಲಿಂದ ಶುರುʼ ಎಂದು ಬರೆದು ಕೊನೆಗೆ ಹ್ಯಾಪಿ ಯುಗಾದಿ.. ಯುಗಾದಿ ಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ. ಯುಗಾದಿಯ ಶುಭಾಶಯ ತಿಳಿಸಿದ ಅವರು ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದಿರುವ ಬೋರ್ಡ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಅಪ್ಲೋಡ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಕಾಂತಾರ ಚಾಪ್ಟರ್ 2 ಬರುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಅಥವಾ ಅಧ್ಯಾಯ 2 ಹೆಸರಿನಲ್ಲೇ ಬೇರೆ ಸಿನಿಮಾ ಬರುತ್ತಾ ಎಂದು ಕೇಳುತ್ತಿದ್ದಾರೆ.ಅಪ್ಲೋಡ್ ಮಾಡಿದ ಫೋಟೋವನ್ನು ಪತ್ನಿ ಪ್ರಗತಿ ಶೆಟ್ಟಿ, ಸು ಫ್ರಂ ಸೋ ಸಿನಿಮಾದ ರವಿಯಣ್ಣ ಪಾತ್ರದ ಮೂಲಕವೇ ಪ್ರಸಿದ್ಧರಾಗಿರುವ ನಟ, ಕಾಂತರ ಬರಹಗಾರ ಶಾನೀಲ್ ಗೌತಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರಿಗೆ ಟ್ಯಾಗ್ ಮಾಡಿದ್ದು ಅವರು ಅಧ್ಯಾಯ 2 ರಲ್ಲಿ ಇರುವುದು ದೃಢಪಟ್ಟಿದೆ.








