ನವದೆಹಲಿ : ಯಾರ್ ಮೇಲೆ ನಿರಂತರವಾಗಿ ದಾಳಿ ನಡೆಸಿರುವ ಇಸ್ರೇಲ್, ಇದೀಗ ಇಸ್ರೇಲ್ ಸಚಿವ ಜೀವ್ ಎಲ್ಕಿನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದು, ಯುದ್ಧ ಮುಗಿಯಲ್ಲ, ಅದು ನಮಗೆ ವರದಾನ. ಯುದ್ಧ ಯಾವಾಗ ಮುಗಿಯುತ್ತೆ ಅನ್ನುವುದಕ್ಕಿಂತ. ಶತ್ರುಗಳಿಗೆ ಎಷ್ಟು ಡ್ಯಾಮೇಜ್ ಮಾಡುತ್ತೇವೆ ಅನ್ನುವುದು ಮುಖ್ಯವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯುದ್ಧ ಮುಗಿಯಲ್ಲ ಯುದ್ಧವೇ ನಮಗೆ ವರದಾನವಿದ್ದಂತೆ. ಯುದ್ಧ ಯಾವಾಗ ಮುಗಿಯುತ್ತೆ ಅನ್ನುವ ಬಗ್ಗೆ ಚರ್ಚೆಯಾಗಿಲ್ಲ. ಶತ್ರುಗಳಿಗೆ ಎಷ್ಟು ಡ್ಯಾಮೇಜ್ ಮಾಡುತ್ತೇವೆ ಅನ್ನೋದೇ ಮುಖ್ಯವಾಗಿದೆ. ಪ್ರತಿದಿನ ದಾಳಿ ಮಾಡುವುದರಿಂದ ಇಸ್ರೇಲ್ ಪಾಲಿಗೆ ಅದು ಒಂದು ವರದಾನ ಇದ್ದಂತೆ. ಇಸ್ರೇಲ್ ಸೇನೆಯ ರೇಡಿಯೋ ಜೊತೆಗೆ ಸಚಿವ ಜೀವ್ ಎಲ್ಕೀನ್ ಮಾತನಾಡಿದ್ದು ಈ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.








