ಚಿಕ್ಕಮಗಳೂರು : ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ ನಡೆಸಲಾಗಿದೆ. ನಿನ್ನೆ ಅಮಾವಾಸ್ಯೆ ಹಿನ್ನೆಲೆ ದೇವಾಲಯದ ವಾಮಾಚಾರ ಮಾಡಿದ್ದಾರೆ. ಕಂಚಿನಕೆರೆ ಕಾಲಭೈರವೇಶ್ವರ ದೇಗುಲದ ಎದುರೇ ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇಗುಲದಲ್ಲಿ ಕಲ್ಲುಗಳನಿಟ್ಟು ಅರಿಶಿಣ, ಕುಂಕುಮ ಹಾಗೂ ನಿಂಬೆಹಣ್ಣು ಬಳಸಿ ವಾಮಾಚಾರ ಮಾಡಿದ್ದಾರೆ. ದೇಗುಲದ ಮುಂದೆ ಕಲ್ಲುಗಳಿಂದ ವೃತ್ತ ರಚಿಸಿ ಮಧ್ಯದಲ್ಲಿ ವಾಮಾಚಾರ ನಡೆಸಿದ್ದಾರೆ. ಕಳೆದು ವರ್ಷ ಯುಗಾದಿ ಹಿಂದಿನ ದಿನವೇ ಕಳ್ಳತನ ಕೂಡ ನಡೆದಿತ್ತು. ಇದೀಗ ಈ ಬಾರಿಯೂ ಕೂಡ ಯುಗಾದಿ ಹಿಂದಿನ ದಿನ ಅಂದರೆ ಅಮಾವಾಸ್ಯೆಯ ದಿನದಂದು ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ.








