ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಹಾಡು ಹಾಡಿದವರ ವಿರುದ್ಧ ಇದೀಗ ದೂರು ದಾಖಲಾಗಿದೆ. ಭಾನುವಾರ ರಾತ್ರಿ ನಮ್ಮ ಮೆಟ್ರೋ ರೈಲಿನಲ್ಲಿ ಈ ಒಂದು ಘಟನೆ ನಡೆದಿತ್ತು. ಸಂಗೀತ ಕಾರ್ಯಕ್ರಮದಲ್ಲಿ ಯುವಜನರ ಗುಂಪು ಒಂದು ಭಾಗಿಯಾಗಿತ್ತು. ಮೆಟ್ರೋದಲ್ಲಿ ಪ್ರಯಾಣಿಸುವಾಗ ಈ ಒಂದು ಯುವಜನರ ಗುಂಪು ಜೋರಾಗಿ ಹಾಡು ಹಾಡಿದ್ದಾರೆ.
ಇದು ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಮೆಟ್ರೋದಲ್ಲಿ ಕೆಳಗೆ ಕುಳಿತು ಯುವತಿಯರು ಹಾಡು ಹಾಡಿದ್ದರು. ಈ ಕುರಿತು ಮೆಟ್ರೋ ಅಧಿಕಾರಿ ಒಬ್ಬರು ಪೀಣ್ಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೆಟ್ರೋ ಸಿಬ್ಬಂದಿ ದೂರಿನ ಅನ್ವಯ ಇದೀಗ ಪೀಣ್ಯ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿದೆ.








