ಚಿಕ್ಕಮಗಳೂರು : ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿದಂತೆ ಚಿಕ್ಕಮಂಗಳೂರು ಜಿಲ್ಲೆಯಿಂದ ಒಟ್ಟು 15 ಜನರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಬಿಜೆಪಿ ಯುವ ಮೋರ್ಚಾ ಸೇರಿದಂತೆ 15 ಜನರ ವಿರುದ್ಧ ಈ ಒಂದು ಗಡಿಪಾರು ಆದೇಶ ಹೊರಡಿಸಿದೆ.
ವಿಚಾರಣೆಗೆ ಬರುವಂತೆ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಿದ್ದು, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್, ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ.ಗೌಡ ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಇದೀಗ ಗಡಿಪಾರು ನೋಟಿಸ್ ನೀಡಲಾಗಿದೆ. ಪೊಲೀಸ್ ಕಾಯ್ದೆ 1963ರ ಕಲಂ 58ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ಉಪವಿಭಾಗಾಧಿಕಾರಿ ನಟೇಶ್ ನೋಟಿಸ್ ಜಾರಿ ಮಾಡಿದ್ದಾರೆ. ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಪೊಲೀಸರು ಪ್ರಸ್ತಾವನೆ ಕಳುಹಿಸಿದ್ದರು. ಮಾರ್ಚ್ 25ರಂದು ವಿಚಾರಣೆಗೆ ಹಾಜರಾಗುವಂತೆ 15 ಜನರಿಗೆ ಸೂಚನೆ ನೀಡಲಾಗಿದೆ ಚಿಕ್ಕಮಂಗಳೂರು ಎಸಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಸಾರ್ವಜನಿಕ ಶಾಂತಿಗೆ ಭಂಗ, ನೈತಿಕ ಪೊಲೀಸ್ ಗಿರಿ, ಹಾಗೂ ಕೋಮು ಪ್ರಚೋದನೆ ಹಿನ್ನೆಲೆ 15 ಜನರಿಗೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.








