ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಪ್ರೀತಿಸಿ ಅಂತರ್ಜಾತಿ ವಿವಾಹವಾದವರ ರಕ್ಷಣೆಗಾಗಿ ಹೊಸ ವಿಧೇಯಕ ಮಂಡನೆ ಆಯಿತು. ವಿಧಾನಸಭೆಯಲ್ಲಿ ಇವ ನಮ್ಮವ ಇವ ನಮ್ಮವ ವಿಧೇಯಕ ಮಂಡನೆ ಆಗಿದೆ. ಅಂತರ್ಜಾತಿ ವಿವಾಹದ ಜೋಡಿಗಳ ಹತ್ಯೆ ಮಾಡಿದರೆ ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತೆ.
ಅಂತರ್ಜಾತಿ ವಿವಾಹವಾದರೆ ಸಾಮಾಜಿಕ ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ. ಸಂಬಂಧಿಸಿದ ಜೋಡಿ ವಾಸ ಸ್ಥಳದಿಂದ ಹೊರ ಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರ ಹಾಕುವುದು ಕಾನೂನುಬಾಹಿರ. ಜಾತಿ ಇಲ್ಲವೇ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಇರುವಂತಿಲ್ಲ. ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ.
ಅಂತರ್ಜಾತಿ ವಿವಾಹಿತರಿಂದ ಕುಟುಂಬದ ಆಸ್ತಿ ದಂಡ ಹಾಕುವಂತಿಲ್ಲ. ಕೆಲಸಕ್ಕೆ ಅಡ್ಡಿ ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧವಾಗಿದೆ. ಅಂತರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ. ಇಬ್ಬರ ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ. ವಿವಾಹಿತ ಜೋಡಿಗೆ ಹಿಂಸೆ ಮಾನಸಿಕ ನಿಂದನೆ ಕಾನೂನುಬಾಹಿರ. ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಮಾಡುವುದು ಸರಿಯಲ್ಲ.
ಅಂತರ್ಜಾತಿ ವಿವಾಹದ ಜೋಡಿಯನ್ನು ಅಪಹರಣ ಮಾಡುವುದು ಆರ್ಥಿಕ ಬಹಿಷ್ಕಾರ ಹಾಕುವುದು ಕಾನೂನುಬಾಹಿರ. ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ. ಬ್ಯಾಂಕ್ ಖಾತೆ ಸಹಿತ ಉದ್ಯೋಗ ಕೊಟ್ಟರ ಮೇಲೆ ಒತ್ತಡ ಹೇರುವುದು ಅಪರಾಧ. ಲೈಂಗಿಕ ಹಿಂಸೆ ನೀಡುವುದು ಕಿರುಕುಳ ನೀಡುವುದು ಸಹ ಅಪರಾಧವಾಗಿದೆ. ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಇರುವುದು ಅಪರಾಧವಾಗಿದೆ. ಅಂತರ್ಜಾತಿ ವಿವಾಹಿತರನ್ನು ಬೇರ್ಪಡಿಸಿ ಬೇರೆ ಮದುವೆ ಮಾಡಿಸುವಂತಿಲ್ಲ. ಒಂದು ವೇಳೆ ಮರ್ಯಾದೆ ಹತ್ಯೆ ಮಾಡಿದರೆ ಐದು ವರ್ಷ ಜೈಲು ದಂಡ ಪಿಕ್ಸ್ ಎಂದು ವಿದೇಯಕದಲ್ಲಿ ಉಲ್ಲೇಖಿಸಲಾಗಿದೆ.








