ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಒಂದು ಪ್ರಕರಣದಲ್ಲಿ ಪ್ರೀತಮ್ ಗೌಡ ಹಾಗೂ ಶ್ರೇಯಸ್ ಪಟೇಲ್ ಅತ್ಯಾಪ್ತರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೌದು ಶಾಸಕ ಪ್ರೀತಮ್ ಗೌಡ ಹಾಗು ಸಂಸದ ಶ್ರೇಯಸ್ ಪಟೇಲ್ ಆಪ್ತರ ಹೆಸರು ಈ ಪ್ರಕರಣದಲ್ಲಿ ಉಲ್ಲೇಖವಾಗಿತ್ತು. ಆದರೆ SIT ಅಧಿಕಾರಿಗಳು ಈ ಮೂವರ ಹೆಸರನ್ನು ಕೈಬಿತ್ತದೆ. ಹಾಗಾಗಿ ಮೂವರಿಗೂ ಇದೀಗ ಬಿಗ್ ರಿಲೀಫ್ ಸಿಕ್ಕಿದ್ದು, ಆರೋಪ ಮುಕ್ತರಾಗಿದ್ದಾರೆ.
ಪ್ರೀತಂ ಗೌಡ ಆಪ್ತರಾಗಿರುವ ಶರತ್ ಮತ್ತು ಕಿರಣ್ ಹಾಗೂ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಮೂವರಿಗೂ ಬಿಗ್ ರಿಲೀಫ್ ಸಿಕ್ಕಿದ್ದು, ಇದಕ್ಕೆ ಕಾರಣ ಇವರ ಮೇಲಿರುವ ಆರೋಪ ಸಾಬೀತು ಆಗಿಲ್ಲ. ಹಾಗಾಗಿ ಎಸ್ಐಟಿ ಇವರ ಹೆಸರುಗಳನ್ನು ಕೈ ಬಿಟ್ಟಿದೆ. ಫೆಬ್ರವರಿ 19ರಂದುಪ್ರಕರಣಕ್ಕೆ ಸಬಂಧಿಸಿದಂತೆ 13, 712 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದೀಗ ಶರತ್, ಕಿರಣ್ ಮತ್ತು ಪುಟ್ಟರಾಜು ಅವರ ಹೆಸರನ್ನು ಅಧಿಕಾರಿಗಳು ಮೂವರ ಹೆಸರನ್ನು ಕೈಬಿಟ್ಟಿದೆ.
ಪೆನ್ ಡ್ರೈವ್ ಹಂಚಿಕೆಯಲ್ಲಿ ಇವರ ಹೆಸರು ಕೂಡ ಕೇಳು ಬಂದಿತು. ಆದರೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ವೈರಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುವುದು ವರದಿಯಲ್ಲಿ ತಿಳಿದು ಬಂದಿದೆ.ಇದೇ ವಿಚಾರವನ್ನು ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆ ಮಾಡಲಾಗಿದೆ.








