ಮುಂಬೈ : ಇತ್ತೀಚಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ಹಾಗೂ ಯುವತಿಯರ ಫೋಟೋ ಸೆರೆ ಹಿಡಿದ ಪ್ರಕರಣ ನಡೆದಿತ್ತು. ಇದೀಗ ಮುಂಬೈನಲ್ಲಿ ಬೆಚ್ಚಿಬಿಳಿಸುವ ಘಟನೆ ವರದಿಯಾಗಿದ್ದು ಸರ್ಕಾರಿ ಕೆಲಸದಲ್ಲಿದ್ದ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಸೆರೆ ಹಿಡಿದು ಪ್ರತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ವರದಿಯಾಗಿದೆ.
ಹೌದು ಪತ್ನಿಯ ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ಸೆರೆ ಹಿಡಿದಿದ್ದಾನೆ. ಬಾತ್ರೂಂನಲ್ಲಿ ಮೊಬೈಲ್ ಇಟ್ಟು ಪತ್ನಿಯ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ಬಳಿಕ ಸರ್ಕಾರಿ ಉದ್ಯೋಗದಲ್ಲಿರುವ ಪತ್ನಿಗೆ 1.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಬೇಡಿಕೆ ಈಡೇರಿಸದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಕೆರಳಿದ ಪತ್ನಿ ದೂರು ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
1.5 ಲಕ್ಷ ರೂಪಾಯಿ ಹಣದ ಬೇಡಿಕೆ ಈಡೇರಿಸಲು ನಿರಾಕರಿಸಿದಾಗ ಪತ್ನಿಯ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಗಂಡ ಹಾಗೂ ಆತನ ಪೋಷಕರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಲು ಪತ್ನಿ ಮುಂದಾಗಿದ್ದಾಳೆ. ಆದರೆ ಪ್ರಯೋಜನವಾಗಿಲ್ಲ. ಹಣ ಕೊಡದಿದ್ದರೆ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಲೀಕ್ ಮಾಡುವುದಾಗಿ ಹೇಳಿದ್ದಾನೆ.
ಜೇಮಲ್ ಸೇರಿದಂತೆ ಕೆಲವೆಡೆ ಈ ವಿಡಿಯೋಗಳನ್ನು ಸ್ಟೋರಿ ಮಾಡಿರುವುದಾಗಿ ಎಚ್ಚರಿಸಿದ್ದಾನೆ. ಗಂಡನ ಪರಿಪರಿಯಾಗಿ ಬೇಡಿಕೊಂಡರು 1.5 ಲಕ್ಷ ರೂಪಾಯಿ ಹಣದಲ್ಲಿ ಒಂದು ರೂಪಾಯಿ ಕಡಿಮೆ ಇಲ್ಲ ಎಂದು ಎಚ್ಚರಿಸಿದ್ದಾನೆ. ಪತ್ನಿ ಎಷ್ಟೇ ಬೇಡಿಕೊಂಡರು ಪತಿ ತನ್ನ ಹಠ ಬಿಡಲಿಲ್ಲ ಹೀಗಾಗಿ ಪತ್ನಿ ಬೇರೆ ದಾರಿ ಕಾಣದೆ ಪೊಲೀಸರಿಗೆ ದೂರು ನೀಡಿದ್ದಾಳೆ.







