ಬೆಂಗಳೂರು : ನಿರ್ದೇಶಕ ಪ್ರೇಮ್ ನಿರ್ದೇಶನದ KD ಸಿನಿಮಾಗೆ ಇದೀಗ ಸಂಕಷ್ಟ ಎದುರಾಗಿದ. ಸರ್ಸೆ ಸರಸೆ ನಿನ್ನ ಸೆರಗ ಸರಸೆ ಹಾಡಿನ ವಿರುದ್ಧ ಇದೀಗ ಆಕ್ರೋಶ ಭುಗಿಲೆದಿದೆ. ವಿರೋಧದ ಜೊತೆಗೆ ಸಾಲು ಸಾಲು ದೂರುಗಳು ದಾಖಲಾಗಿದೆ.
ವಿನೀತ್ ಎಂಬುವವರಿಂದ ಸೆನ್ಸಾರ್ ಮಂಡಳಿಗೆ ದೂರು ದಾಖಲಾಗಿದೆ. ಮುಂಬೈ ಸೈಬರ್ ಠಾಣೆಗೂ ವಿನೀತ್ ದೂರು ನೀಡಿದ್ದಾರೆ. ದೆಹಲಿ ಮೂಲದ ವಕೀಲ ವಿನೀತ ಜಿಂದಾಲ್ ದೂರು ಸಲ್ಲಿಸಿದ್ದಾರೆ. ಮದನ್ ಗುಪ್ತ ಮತ್ತೊಂದು ದೂರು ನೀಡಿದ್ದಾರೆ. ಇತ್ತೀಚಿಗೆ KD ಸಿನಿಮಾದ ಸರಸೇ ಸರ್ಸೆ ನಿನ್ನ ಸೆರಗ ಸರಸೆ ಎನ್ನುವ ಸಾಂಗ್ ರಿಲೀಸ್ ಆಗಿತ್ತು.
ಇದೀಗ ಈ ಒಂದು ಹಾಡಿನ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯವೂ ಕೂಡ ಎಂಟ್ರಿ ಆಗಿದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಚಿತ್ರತಂಡಕ್ಕೆ ನೋಟಿಸ್ ನೀಡಲಾಗಿದೆ ನೋಟಿಸ್ ಗೆ ಚಿತ್ರತಂಡ ಇದೀಗ ಉತ್ತರಿಸಬೇಕಾಗಿದೆ.








