ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವೊಂದು ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ: ಕೊಲೆಯಾದವರನ್ನು ವಿಲ್ಸನ್ ಗಾರ್ಡನ್ ನಿವಾಸಿ, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ರಶೀದ್ ಅಹಮದ್ (45) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪರ್ವೇಜ್ ಮತ್ತು ರಶೀದ್ ನಡುವೆ ಮೌಲ್ಡ್ (Mold) ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳ ಶುರುವಾಗಿತ್ತು.
ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ, ಪರ್ವೇಜ್ ಅಹಮದ್ ಅವರ ಕಾಲಿಗೆ ಬ್ಯಾಟ್ನಿಂದ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ರಶೀದ್ ಅವರು ಕೆಳಕ್ಕೆ ಬಿದ್ದು ಅವರ ತಲೆ ಪಾದಚಾರಿ ಮಾರ್ಗದ ಕಲ್ಲಿಗೆ (Pavement) ಜೋರಾಗಿ ಬಡಿದಿದೆ. ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
📍 Bengaluru, Karnataka
A 45-year-old jeep mechanic, Rasheed Pasha, was brutally beaten to death by local goons in Bengaluru.According to reports, the attackers had been demanding ₹50,000 as “protection money.” Rasheed Pasha clearly refused to pay. After that, the goons… pic.twitter.com/uFJOUonExw
— Team Rising Falcon (@TheRFTeam) March 16, 2026
ಆರೋಪಿಗಳ ಬಂಧನ: ಈ ಭೀಕರ ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಲ್ಸನ್ ಗಾರ್ಡನ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪೊಲೀಸರು ಪ್ರಮುಖ ಆರೋಪಿ ಪರ್ವೇಜ್ ಮತ್ತು ಆತನ ಸಹಚರರಾದ ಅಫ್ರೀದ್ ಹಾಗೂ ಮುನವ್ವರ್ ಎಂಬುವವರನ್ನು ಬಂಧಿಸಿದ್ದಾರೆ.
ಹಫ್ತಾ ವಸೂಲಿ ಆಯಾಮವಿಲ್ಲ: ಆರಂಭದಲ್ಲಿ ಇದೊಂದು ಹಫ್ತಾ ವಸೂಲಿಗಾಗಿ ನಡೆದ ಕೊಲೆ ಎಂಬ ಶಂಕೆ ಇತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಹಫ್ತಾ ವಸೂಲಿಯ ಯಾವುದೇ ಆಯಾಮ ಕಂಡುಬಂದಿಲ್ಲ. ಕೇವಲ ಕೆಲಸದ ವಿಚಾರದಲ್ಲಿ ನಡೆದ ಸಣ್ಣ ಜಗಳವೇ ಈ ಕೊಲೆಗೆ ಪ್ರಚೋದನೆ ನೀಡಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025 ಘೋಷಣೆ: ಕನ್ನಡದ ಅಮರೇಶ ನುಗಡೋಣಿಗೆ ಒಲಿದ ಗೌರವ
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು








