Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಲಿಂಡರ್ ಕೊರತೆ ಎಫೆಕ್ಟ್ : ಕಲಬುರ್ಗಿಯಲ್ಲಿ ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌ನ 10ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು!

15/03/2026 1:29 PM

ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಜಿಟಿ ಸತ್ಯನಾರಾಯಣ ಒತ್ತಾಯ

15/03/2026 1:27 PM

Shocking: ದೇಶದಲ್ಲಿ ಭೀಕರ ಕೃತ್ಯ: ಸ್ವಂತ ತಂಗಿಯನ್ನು 40 ಬಾರಿ ಇರಿದು ಕೊಂದ ಇಂಜಿನಿಯರ್!

15/03/2026 1:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಜಿಟಿ ಸತ್ಯನಾರಾಯಣ ಒತ್ತಾಯ
KARNATAKA

ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಜಿಟಿ ಸತ್ಯನಾರಾಯಣ ಒತ್ತಾಯ

By kannadanewsnow0915/03/2026 1:27 PM

ಶಿವಮೊಗ್ಗ: ಜಿಲ್ಲೆಯ ತಾಲ್ಲೂಕಿನ ಶೇಡ್ತಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹೀಗೆ ಅಮಾನುಷ ರೀತಿಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದಂತ ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ತುಮುರಿ ಆಗ್ರಹಿಸಿದ್ದಾರೆ.

ಇಂದು ಈ ಘಟನೆ ಸಂಬಂಧ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನ ಶೇಡ್ತಿಕೆರೆ ಸರ್ಕಾರಿ ಶಾಲೆಯ ಸಹ ಶಿಕ್ಷಕರಾದ ಮೂರ್ತಿ ಬಿ., ಪ್ರಮೋದ್ ಸಣ್ಣಕ್ಕಿ ಹಾಗೂ ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಅವರು ಸುಶ್ರುತ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯವೇ ಸರಿ ಎಂದರು.

​ಈ ರೀತಿಯಾಗಿ ವಿಧ್ಯಾರ್ಥಿ ಸುಶ್ರುತ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದಂತ ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇತರ ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

​ಜಿ.ಟಿ ಸತ್ಯನಾರಾಯಣ ತುಮುರಿ ಮಾತಿನ ಪ್ರಮುಖಾಂಶಗಳು:

  • ​ಡಿವೈಎಸ್‌ಪಿ ಭೇಟಿ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಎಎಸ್‌ಪಿ ಅವರನ್ನು ಭೇಟಿ ಮಾಡಿ, ಘಟನೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ.
  • ​ನಾಲ್ವರ ಮೇಲೆ ಆರೋಪ: ಮಕ್ಕಳ ಹೇಳಿಕೆಯ ಪ್ರಕಾರ, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಒಟ್ಟು ನಾಲ್ವರು ಈ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ. ಆದರೆ, ಕೇವಲ ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಮೇಲೆ ಮಾತ್ರ ಕ್ರಮ ಕೈಗೊಳ್ಳಲು ಬಿಇಒ ಶಿಫಾರಸು ಮಾಡಿರುವುದನ್ನು ಜಿ.ಟಿ ಸತ್ಯನಾರಾಯಣ ಖಂಡಿಸಿದರು. ಅಲ್ಲದೇ ಈ ಘಟನೆಗೆ ಕಾರಣರಾದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಬಿಇಒ ಒತ್ತಾಯಿಸಿದರು.
  • ​ಬಿಇಒ ನಡೆಗೆ ಅಸಮಾಧಾನ: ಘಟನೆ ನಡೆದು ನಾಲ್ಕು ದಿನಗಳಾದರೂ ಸಾಗರ ಬಿಇಒ ಸದಾನಂದಸ್ವಾಮಿ ಅವರು ಮಗುವಿನ ಕ್ಷೇಮ ವಿಚಾರಿಸಲು ಭೇಟಿ ನೀಡದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ಆರೋಪಿಸಿದರು.
  • ​ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ: ಶೆಡ್ತೀಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಎಂಬುವರ ಮೇಲೆ ಈ ಹಿಂದೆಯೂ ಇಂತಹ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಮುಚ್ಚಿ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಇವರ ಮೇಲೆ ಮತ್ತು ಉಳಿದ ಮೂವರ ಮೇಲೆ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಮಾನತು ಮಾಡಬೇಕೆಂದು ಒತ್ತಾಯಿಸಲಾಗಿದೆ ಸಾಮಾಜಿಕ ಹೋರಾಟಗಾರ, ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ತುಮುರಿ ಆಗ್ರಹಿಸಿದರು.

​ಮುಂದಿನ ನಡೆ:

​ಈ ಪ್ರಕರಣದ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿಕೊಂಡು ಇಲಾಖಾ ತನಿಖೆ ನಡೆಸಬೇಕು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ಈ ವಿಚಾರವನ್ನು ತರಲು ಪ್ರಯತ್ನಿಸಲಾಗುತ್ತಿದ್ದು, ಪತ್ರಿಕಾ ವರದಿಗಳ ಆಧಾರದ ಮೇಲೆ ಅವರು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಸಿಲಿಂಡರ್ ಕೊರತೆ ಎಫೆಕ್ಟ್ : ಕಲಬುರ್ಗಿಯಲ್ಲಿ ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌ನ 10ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು!

15/03/2026 1:29 PM1 Min Read

BIG NEWS : ಪಂಚ ರಾಜ್ಯ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ : ಶಾಸಕ ಸಲೀಂ ಅಹ್ಮದ್

15/03/2026 12:59 PM1 Min Read

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

15/03/2026 12:51 PM1 Min Read
Recent News

ಸಿಲಿಂಡರ್ ಕೊರತೆ ಎಫೆಕ್ಟ್ : ಕಲಬುರ್ಗಿಯಲ್ಲಿ ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌ನ 10ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು!

15/03/2026 1:29 PM

ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಜಿಟಿ ಸತ್ಯನಾರಾಯಣ ಒತ್ತಾಯ

15/03/2026 1:27 PM

Shocking: ದೇಶದಲ್ಲಿ ಭೀಕರ ಕೃತ್ಯ: ಸ್ವಂತ ತಂಗಿಯನ್ನು 40 ಬಾರಿ ಇರಿದು ಕೊಂದ ಇಂಜಿನಿಯರ್!

15/03/2026 1:20 PM

SHOCKING : ಆಂಧ್ರಪ್ರದೇಶದಲ್ಲಿ ಘೋರ ದುರಂತ: ಬೈಕ್ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು !

15/03/2026 1:14 PM
State News
KARNATAKA

ಸಿಲಿಂಡರ್ ಕೊರತೆ ಎಫೆಕ್ಟ್ : ಕಲಬುರ್ಗಿಯಲ್ಲಿ ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌ನ 10ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು!

By kannadanewsnow0515/03/2026 1:29 PM KARNATAKA 1 Min Read

ಕಲಬುರ್ಗಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ಹಲವು ಕಡೆಗಳಲ್ಲಿ ಹಲವು ರೀತಿಯಲ್ಲಿ ಜನ…

ಸಾಗರದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಜಿಟಿ ಸತ್ಯನಾರಾಯಣ ಒತ್ತಾಯ

15/03/2026 1:27 PM

BIG NEWS : ಪಂಚ ರಾಜ್ಯ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ : ಶಾಸಕ ಸಲೀಂ ಅಹ್ಮದ್

15/03/2026 12:59 PM

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

15/03/2026 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.