ಬೆಂಗಳೂರು : ಜೈಲುಗಳಲ್ಲಿ ಮಾದಕ ವಸ್ತು ನಿರ್ಮೂಲನೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದು ರಾಜ್ಯಾದ್ಯಂತ ಜೈಲಿನಲ್ಲಿ ಮಾದಕ ವಸ್ತು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೂಲಕ ಜೈಲುಗಳಲ್ಲಿ ಡ್ರಗ್ಸ್ ನೆಟ್ವರ್ಕ್ ಬ್ರೇಕ್ ಹಾಕಲು ಇದೀಗ ಅಲೋಕ್ ಕುಮಾರ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆ ಜೊತೆ ಸೇರಿ ಡ್ರಗ್ಸ್ ಮುಕ್ತ ಕಾರಾಗೃಹ ಮಾಡಲು ಪಣ ತೊಟ್ಟಿದ್ದಾರೆ. ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿವಿಧ ಮಾದರಿ ಡ್ರಗ್ಸ್ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ರಾಜ್ಯದ ಎಲ್ಲಾ ಜೈಲುಗಳಲ್ಲಿ ಶೇಕಡ 10 ರಷ್ಟು ಕೈದಿಗಳಿಗೆ ಡ್ರಗ್ಸ್ ಮಾದರಿ ಪರೀಕ್ಷೆ ನಡೆಸಲಾಗಿದೆ. ಜೈಲು ವೈದ್ಯಾಧಿಕಾರಿಗಳಿಂದ ಕೈದಿಗಳಿಗೆ ಮಾದಕ ವಸ್ತು ಪರೀಕ್ಷೆ ನಡೆಸಲಾಗಿದೆ. ಕೈದಿಗಳು ಡ್ರಗ್ ಅಡಿಕ್ಟ್ ಆಗಿದ್ದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.








