ಬೆಂಗಳೂರು : ಸಿಲಿಂಡರ್ ಅಭಾವದ ಸಂಕಷ್ಟದ ಬೆನ್ನಲ್ಲೇ ರಾಜಧಾನಿಯ ಜನತೆಗೆ ಹೋಟೆಲ್ ಉದ್ಯಮಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಹೈರಾಣಾಗಿರುವ ಹೋಟೆಲ್ ಮಾಲೀಕರು, ಈಗ ಅನಿವಾರ್ಯವಾಗಿ ತಿಂಡಿಗಳ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ.
ಹೌದು ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಬೆಂಗಳೂರಿನ ಹೋಟೆಲ್ ಮಾಲೀಕರಿಗೂ ಇದರ ಬಿಸಿ ತಟ್ಟಿರುವುದು ಹೊಸ ವಿಷಯವೇನಲ್ಲ. ಹೀಗಿರುವಾಗ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಕೆಲ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದ್ದು, ಗ್ರಾಹಕ ಜೇಬಿಗೆ ಬಿಸಿ ಮುಟ್ಟಿಸಿವೆ.
ಹೋಟೆಲ್ ವ್ಯವಹಾರವನ್ನು ನಿಲ್ಲಿಸಲು ಸಾಧ್ಯವಿಲ್ಲದ ಕಾರಣ ಹೆಚ್ಚುವರಿ ಹಣ ನೀಡಿ ಗ್ಯಾಸ್ ಖರೀದಿಸಿ ಹೋಟೆಲ್ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹೆಚ್ಚುವರಿ ಖರ್ಚಿನ ಪರಿಣಾಮವಾಗಿ ಇದೀಗ ಗ್ರಾಹಕರಿಗೂ ಬಿಗ್ ಶಾಕ್ ಎದುರಾಗಿದೆ. ಗ್ಯಾಸ್ ಕೊರತೆಯ ಹಿನ್ನಲೆಯಲ್ಲಿ ಹಲವು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಸಹ ಏರಿಕೆ ಕಂಡಿದೆ.
ತಿಂಡಿ ಪದಾರ್ಥಗಳ ಹಿಂದಿನ & ಈಗಿನ ದರ
ಇಡ್ಲಿ – 30 -40 ರೂ.
ವಡೆ – 30 -40 ರೂ.
ರವಾ ಇಡ್ಲಿ 40-50 ರೂ.
ಖಾರಾ ಬಾತ್ 30-40 ರೂ.
ಕೇಸರಿ ಬಾತ್ 30- 40 ರೂ.
ಪಲಾವ್ – 50 -60 ರೂ.
ಪೂರಿ ಸಾಗು – 60-70 ರೂ.
ಸೆಟ್ ದೋಸೆ 60-70 ರೂ.
ಮಸಾಲಾ ದೋಸೆ – 60-70 ರೂ.
ರೈಸ್ ಸಾಂಬಾರ್ – 70-80 ರೂ.
ಊಟ – 90 -100 ರೂ.
ರೋಟಿ 90-100 ರೂ.
ಬೆಲೆ ಏರಿಕೆಗೆ ಕಾರಣವೇನು?
ಹೋಟೆಲ್ ಮಾಲೀಕರ ಸಂಘದ ಪ್ರಕಾರ, ಈ ಕೆಳಗಿನ ಕಾರಣಗಳು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ:
ಸಿಲಿಂಡರ್ ಕೊರತೆ: ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆ ತೆತ್ತು ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ.
ಕೈಕೊಟ್ಟ ಬೆಳೆ: ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಉದ್ದು, ಬೇಳೆಕಾಳುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ.
ನಿರ್ವಹಣಾ ವೆಚ್ಚ: ವಿದ್ಯುತ್ ದರ ಏರಿಕೆ ಮತ್ತು ಕೆಲಸಗಾರರ ವೇತನ ಹೆಚ್ಚಳದಿಂದಾಗಿ ಹೋಟೆಲ್ ನಡೆಸುವುದು ಕಷ್ಟಕರವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಗ್ರಾಹಕರ ಅಸಮಾಧಾನ
ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಬಾಡಿಗೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಹೋಟೆಲ್ ತಿಂಡಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. “ಬೆಳಿಗ್ಗೆ ಆಫೀಸ್‌ಗೆ ಹೋಗುವಾಗ ಅಗ್ಗದಲ್ಲಿ ಸಿಗುತ್ತಿದ್ದ ಇಡ್ಲಿ-ದೋಸೆಯೂ ಈಗ ದುಬಾರಿಯಾದರೆ ಮಧ್ಯಮ ವರ್ಗದವರು ಬದುಕುವುದು ಹೇಗೆ?” ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ, ಸಿಲಿಂಡರ್ ಸಂಕಷ್ಟ ಬೆಂಗಳೂರಿಗರ ಹೊಟ್ಟೆಯ ಮೇಲೂ ಪ್ರಭಾವ ಬೀರಿದ್ದು, ಹೊರಗಡೆ ತಿನ್ನುವ ಮುನ್ನ ಜೇಬಿನ ಕಡೆ ಒಮ್ಮೆ ನೋಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ








