ಕೊಪ್ಪಳ/ಕಲಬುರಗಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ (Commercial) ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ.
-
ಕೊಪ್ಪಳದಲ್ಲಿ ಸೌದೆ ಖರೀದಿ: ಕೊಪ್ಪಳದ ಪ್ರಸಿದ್ಧ ಹೋಟೆಲ್‌ವೊಂದರ ಮಾಲೀಕರು ಕಳೆದ ಒಂದು ವಾರದಿಂದ ಸಿಲಿಂಡರ್ ಸಿಗದೆ ಕೆಜಿಗೆ 4 ರೂಪಾಯಿಯಂತೆ ಸುಮಾರು ಒಂದುವರೆ ಟನ್ ಸೌದೆಯನ್ನು ಖರೀದಿಸಿ ಸಂಗ್ರಹಿಸಿದ್ದಾರೆ. 2000 ರಿಂದ 3000 ರೂಪಾಯಿ ನೀಡಲು ಸಿದ್ಧವಿದ್ದರೂ ಕಮರ್ಷಿಯಲ್ ಸಿಲಿಂಡರ್ ಲಭ್ಯವಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
-
ಕಲಬುರಗಿಯಲ್ಲಿ ಸೌದೆ ಒಲೆ ಅಡುಗೆ: ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಹೋಟೆಲ್‌ಗಳಲ್ಲಿ ಈಗ ಸೌದೆ ಒಲೆಯಲ್ಲೇ ಪೂರಿ, ಇಡ್ಲಿ, ವಡೆ ಸೇರಿದಂತೆ ವಿವಿಧ ಉಪಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ಯಾಸ್ ಸ್ಟೌವ್‌ಗಳು ಈಗ ಸಂಪೂರ್ಣವಾಗಿ ಬಂದ್ ಆಗಿವೆ.
-
ಹೋಟೆಲ್ ಬಂದ್ ಭೀತಿ: ರಾಜ್ಯದ ಸುಮಾರು 50% ಹೋಟೆಲ್‌ಗಳು ಮುಂದಿನ ಕೆಲವೇ ದಿನಗಳಲ್ಲಿ ಮುಚ್ಚುವ ಹಂತಕ್ಕೆ ತಲುಪಿವೆ. ಬ್ಯಾಚುಲರ್‌ಗಳು ಮತ್ತು ನಿತ್ಯ ಹೋಟೆಲ್ ಅವಲಂಬಿತರಾಗಿರುವ ಜನರಿಗೆ ಇದರಿಂದ ಭಾರಿ ತೊಂದರೆಯಾಗಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ.
-
ಚಿಕ್ಕಮಗಳೂರಿನಲ್ಲಿ ಸಾಲುಗಟ್ಟಿ ನಿಂತ ಜನ: ಕಡೂರಿನ ಹೆಚ್‌ಪಿ ಗ್ಯಾಸ್ ಕಚೇರಿ ಮುಂದೆ ನೂರಾರು ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ. ಆನ್‌ಲೈನ್‌ನಲ್ಲಿ ಬುಕಿಂಗ್ ಆಗದ ಕಾರಣ ಜನರು ನೇರವಾಗಿ ಕಚೇರಿಗೆ ಬಂದು ಸಿಲಿಂಡರ್‌ಗಾಗಿ ಕಾಯುತ್ತಿದ್ದಾರೆ.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದ್ದು, ಉದ್ಯೋಗ ನಷ್ಟದ ಭೀತಿಯೂ ಎದುರಾಗಿದೆ.
ಅನ್ನದಾಸೋಹ ಮಠಗಳಿಗೂ ತಟ್ಟಿದ ಗ್ಯಾಸ್ ಬಿಸಿ: ಗದಗಿನ ತೋಂಟದಾರ್ಯ ಮಠಕ್ಕೆ ಸಿಲಿಂಡರ್ ಪೂರೈಕೆ ಸ್ಥಗಿತ!
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








