ಬೆಂಗಳೂರು : ಡೈರಿಗಳಿಗೆ ಪೂರೈಕೆಯಾಗುವ ಹಾಲುಗಳಲ್ಲಿ ಕಲಬೆರಕೆ ಆರೋಪ ಕುರಿತಾಗಿ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡ ಪ್ರಶ್ನಿಸಿದರು. ಮಧು ಮಾದೇಗೌಡ ಪ್ರಶ್ನೆಗೆ ಸಭಾ ನಾಯಕ ಎನ್ ಎಸ್ ಬೋಸರಾಜು ಉತ್ತರಿಸಿದರು.
ಕೆಎಂಎಫ್ ಗೆ ಪೂರೈಕೆ ಆಗುವ ಹಾಲಿನಲ್ಲಿ ಕಲಬೆರಿಕೆ ಆಗುತ್ತಿದೆ ಒಟ್ಟು 15 ಲಕ್ಷ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 3049 ಮಾದರಿಗಳಲ್ಲಿ ಕಲಬೆರಕೆ ಕಂಡು ಬಂದಿದೆ ಕಲಬೆರಕೆ ಕಂಡು ಬಂದರೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದು ಎಂದು ಎನ್ ಎಸ್ ಬೋಸರಾಜು ತಿಳಿಸಿದರು.








