ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆಯಲ್ಲಿ ನಗರಸಭೆ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಬುಧವಾರ ಬಿಜೆಪಿ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಲಾಯಿತು. ಆ ಮೂಲಕ ಸಾಗರದಲ್ಲಿ ಫ್ಲೆಕ್ಸ್ ಹಾಳಿಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರ ಹಾಕಿತು.
ಇಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೇಸ್ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ನಗರದಾದ್ಯಂತ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಶಾಸಕರ ಫ್ಲೆಕ್ಸ್ಗಳೇ ಹೆಚ್ಚು ರಾರಾಜಿಸುತಿತ್ತು. ಊರು ತುಂಬಾ ಫ್ಲೆಕ್ಸ್ ಹಾಕಿದ್ದರಿಂದ ನಗರಸಭೆಗೆ ಬಂದ ಆದಾಯ ಎಷ್ಟು ಎನ್ನುವುದನ್ನು ಪೌರಾಯುಕ್ತರು ಬಹಿರಂಗಪಡಿಸಬೇಕು. ಇದರ ಜೊತೆಗೆ ಬಿಜೆಪಿಯವರು ಹಾಕಿರುವ ಫ್ಲೆಕ್ಸ್ಗಳನ್ನು ಒಂದೆರಡು ದಿನಗಳಲ್ಲಿ ತೆಗೆಯುವ ನಗರಸಭೆಯವರು, ಶಾಸಕರು ಮತ್ತು ಅವರ ಕಡೆಯವರು ಹಾಕಿರುವ ಫ್ಲೆಕ್ಸ್ಗಳನ್ನು ತಿಂಗಳುಗಟ್ಟಲೆ ತೆಗೆಯದೆ ಇರುವ ಮೂಲಕ ಮಲತಾಯಿಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಎಲ್ಲರಿಗೂ ಸಮಾನ ಕಾನೂನು ರೂಪಿಸಬೇಕಾದ ನಗರಸಭೆ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಸಾಗರ ನಗರ ವ್ಯಾಪ್ತಿಯಲ್ಲಿ ನಳ ತೆರಿಗೆ ಸಂಗ್ರಹಕ್ಕೆ ಹೋಗುವಾಗ ಅಧಿಕಾರಿಗಳು ಗುದ್ದಲಿ, ಪಿಕಾಸಿ ಹಿಡಿದುಕೊಂಡು ಬರುವ ಮೂಲಕ ಮನೆ ಮಾಲೀಕರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ. ನಳ ಕಂದಾಯ ಪಾವತಿ ಮಾಡಲಿಲ್ಲ ಎಂದು ಸ್ಥಳದಲ್ಲಿಯೆ ನಳ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಬಿಲ್ ಕಲೆಕ್ಟರ್ ಕುಮಾರ್ ಎಂಬಾತ ಮನೆ ಮಾಲೀಕರ ಮೇಲೆ ಒತ್ತಡ ಹಾಕುತ್ತಿದ್ದಾನೆ. ಈ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರನ್ನು ಅವರನ್ನು ಅಮಾನತ್ತು ಮಾಡಬೇಕು. ನಗರಸಭೆ ಪದೇಪದೇ ಇಂತಹ ತಾರತಮ್ಯನೀತಿ ಅನುಸರಿಸಿದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಸಾಗರ ನಗರಸಭೆ ಮಾಜಿ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ನಗರಸಭೆ ಅಧಿಕಾರಿಗಳ ಮಲತಾಯಿಧೋರಣೆ ಹಿಂದಿನಿoದಲೂ ನಡೆಯುತ್ತಿದೆ. ಈ ಬಾರಿ ನಡೆದ ಮಾರಿಜಾತ್ರೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಬಗ್ಗೆ ರಾಜ್ಯವ್ಯಾಪಿ ಚರ್ಚೆ ಸಹ ನಡೆದಿದೆ. ಶಾಸಕರು ಫ್ಲೆಕ್ಸ್ನಲ್ಲಿ ಮಿಂಚಿದರೆ ವಿನಃ, ನಗರಸಭೆಗೆ ವಿಶೇಷ ಅನುದಾನ ತಂದು ಅಭಿವೃದ್ದಿ ಮಾಡಿಲ್ಲ ಎಂದರು.
ಇನ್ನೂ ಸಾಗರದ ಗಣಪತಿ ಬ್ಯಾಂಕ್ ಪಕ್ಕದಲ್ಲಿ ದೊಡ್ಡ ಗಾತ್ರದ ಗೂಡಂಗಡಿಯೊoದನ್ನು ಇರಿಸಲಾಗಿದೆ. ಆರ್.ಬಿ.ಐ. ನಿಯಮ ಪ್ರಕಾರ ಅಂತಹ ಅಂಗಡಿಗಳು ಬ್ಯಾಂಕ್ ಪಕ್ಕದಲ್ಲಿ ಇರಬಾರದು. ನಗರಸಭೆಗೆ ಹತ್ತಾರು ಬಾರಿ ಹೇಳಿದರೂ ಅದನ್ನು ತೆರವುಗೊಳಿಸಿಲ್ಲ ಇಲ್ಲಿ ಕಸದ ರಾಶಿ ಹಾಕಲಾಗುತ್ತಿದೆ ತಾಲೂಕ ಕಚೇರಿ ಎದುರು ಕೂಡ ಮನಬಂದಂತೆ ಅಂಗಡಿಗಳನ್ನು ಹಾಕಿದ್ದಾರೆ ನಗರ ಸಭೆಗೆ ಹಲವಾರು ಬಾರಿ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ನಗರಸಭೆಯ ಬೇಜವಾಬ್ದಾರಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಹಣ ದುರ್ಬಳಕೆ: ಬಿಜೆಪಿ ಮುಖಂಡ ಅರುಣ್ ಕುಗ್ವೆ ಗಂಭೀರ ಆರೋಪ
ಇತ್ತೀಚೆಗೆ ನಡೆದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವೈಯಕ್ತಿಕ ಪ್ರಚಾರದ ಬ್ಯಾನರ್‌ಗಳು ಮತ್ತು ಎಲ್‌ಇಡಿ ವಾಲ್‌ಗಳಿಗೆ ದೇವಸ್ಥಾನದ ಹಣವನ್ನು ಬಳಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಅರುಣ್ ಕುಗ್ವೆ ಆರೋಪಗಳೇನು?
-
ದೇವಸ್ಥಾನದ ಹಣದ ದುರ್ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ರೆಯ ನೆಪದಲ್ಲಿ ತಮ್ಮ ಭಾವಚಿತ್ರವಿರುವ ಬೃಹತ್ ಬ್ಯಾನರ್‌ಗಳನ್ನು ಹಾಕಿಸಿದ್ದರು. ಈ ಫ್ಲೆಕ್ಸ್‌ಗಳ ಅಂದಾಜು 4.5 ಲಕ್ಷ ರೂಪಾಯಿ ಬಿಲ್ ಮತ್ತು ಎಲ್‌ಇಡಿ ವಾಲ್‌ಗೆ ಸಂಬಂಧಿಸಿದ 2 ಲಕ್ಷ ರೂಪಾಯಿ ಬಿಲ್ ಅನ್ನು ಮಾರಿಕಾಂಬಾ ದೇವಸ್ಥಾನದ ಸಮಿತಿಯಿಂದ ಪಾವತಿಸಲಾಗಿದೆ ಎಂದು ಅರುಣ್ ಕುಗ್ವೆ ಆರೋಪಿಸಿದ್ದಾರೆ.
-
ತಾರತಮ್ಯದ ಧೋರಣೆ: ಮಾಜಿ ಶಾಸಕ ಹರತಾಳ ಹಾಲಪ್ಪ ಅವರ ಜನ್ಮದಿನದ ಪ್ರಯುಕ್ತ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಮತ್ತು ಶಿವಾಜಿ ಮಹಾರಾಜರ ಜಯಂತಿಯ ಫ್ಲೆಕ್ಸ್‌ಗಳನ್ನು ಕೇವಲ ಎರಡು ದಿನಗಳಲ್ಲಿ ತೆರವುಗೊಳಿಸಿದ ಅಧಿಕಾರಿಗಳು, ಶಾಸಕರ ಬ್ಯಾನರ್‌ಗಳನ್ನು ತಿಂಗಳುಗಟ್ಟಲೆ ಬಿಟ್ಟಿದ್ದರು ಎಂದು ಅವರು ಕಿಡಿಕಾರಿದ್ದಾರೆ.
-
ಶಾಸಕರಿಗೆ ಸವಾಲು: “ಇದು ನನ್ನ ವೈಯಕ್ತಿಕ ದುಡ್ಡಿನಿಂದ ಹಾಕಿಸಿದ ಫ್ಲೆಕ್ಸ್‌ಗಳು ಎಂದು ಶಾಸಕರು ದೇವರ ಮುಂದೆ ಬಂದು ಪ್ರಮಾಣ ಮಾಡಲಿ” ಎಂದು ಅರುಣ್ ಕುಗ್ವೆ ಸವಾಲು ಹಾಕಿದ್ದಾರೆ. ಸಾರ್ವಜನಿಕರ ಕಾಣಿಕೆ ಹಣವನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸುವುದು ಅಕ್ಷಮ್ಯ ಅಪರಾಧ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ದಬ್ಬಾಳಿಕೆಯ ಆರೋಪ:
ಶಾಸಕರು ತಮ್ಮ ಅಧಿಕಾರ ಬಳಸಿ ದೇವಸ್ಥಾನದ ಸಮಿತಿಯ ಮೇಲೆ ಒತ್ತಡ ಹೇರಿ ಬಿಲ್‌ಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಭಕ್ತರ ನಂಬಿಕೆಗೆ ಬಗೆದ ದ್ರೋಹ ಎಂದು ಬಿಜೆಪಿ ಮುಖಂಡ ಅರುಣ್ ಕುಗ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಪ್ರಮುಖರಾದ ಪ್ರಶಾಂತ್ ಕೆ.ಎಸ್. ಮಾತನಾಡಿ, ಸಾಗರ ಕ್ಷೇತ್ರದಲ್ಲಿ ಅಭಿವೃದ್ದಿಗಿಂತ ಫ್ಲೆಕ್ಸ್ ಹಾಕುವಲ್ಲಿಯೆ ಆಡಳಿತ ಪಕ್ಷ ಹೆಚ್ಚು ಶ್ರಮಿಸುತ್ತಿದೆ. ಶಾಸಕರನ್ನು ಫ್ಲೆಕ್ಸ್ಗಳಲ್ಲಿ ನೋಡಿ ತೃಪ್ತಿಪಟ್ಟುಕೊಳ್ಳಬೇಕಾದ ದುಸ್ಥಿತಿ ಕ್ಷೇತ್ರದಲ್ಲಿ ಇದೆ. ಕಾಂಗ್ರೇಸ್ ಮತ್ತು ಬಿಜೆಪಿ ಸದಸ್ಯರ ಫ್ಲೆಕ್ಸ್ಗೆ ಅನುಸರಿಸುತ್ತಿರುವ ತಾರತಮ್ಯನೀತಿ ಖಂಡನೀಯ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಬಂದ ಮೇಲೆ ಯಾವುದೇ ವ್ಯವಸ್ಥಿತವಾದ ಕಾಮಗಾರಿಗಳು ನಡೆದಿಲ್ಲ ಎಂದರು
ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷೆ ಸವಿತಾ ವಾಸು, ಮಹೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಸಾಗರ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಸತೀಶ್ ಕೆ., ಗಾಯತ್ರಿ ಮಲ್ಲೇಶಪ್ಪ, ಶ್ರೀರಾಮ್, ಸಂತೋಷ್ ಶೇಟ್, ಶ್ವೇತಾ, ರವೀಂದ್ರ ಬಿ.ಟಿ.,, ಜಗನ್ನಾಥ್ ಶೇಟ್, ಸುಜಯ್, ಚಂದ್ರಕಾoತ್, ವಿನೋದ್ ರಾಜ್, ಲೋಕೇಶ್ ಇನ್ನಿತರರು ಹಾಜರಿದ್ದರು.
ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಹಣ ದುರ್ಬಳಕೆ: ಬಿಜೆಪಿ ಮುಖಂಡ ಅರುಣ್ ಕುಗ್ವೆ ಗಂಭೀರ ಆರೋಪ
ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!








