ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುಂಡರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಹೌದು ಬೆಂಗಳೂರಿನಲ್ಲಿ ಹಾಡ ಹಗಲೇ ವ್ಯಕ್ತಿಯ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದ್ದು, ಕಿಡಿಗೇಡಿಗಳು ವ್ಯಕ್ತಿ ಒಬ್ಬನ ಮೇಲೆ 68 ಬಾರಿ ಮಚ್ಚಿನಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅದೃಷ್ಟವಶಾತ್ 68 ಬಾರಿ ಹಲ್ಲೆ ಮಾಡಿದರು ಕೂಡ ವ್ಯಕ್ತಿ ಬದುಕು ಉಳಿದಿದ್ದಾನೆ.
ಬೆಂಗಳೂರಿನ ಮಾಗಡಿ ರಸ್ತೆ ಬದಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಮಚ್ಚಿನಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಕೆಳಗೆ ಬಿದ್ದರೂ ಸಹ ದುಷ್ಕರ್ಮಿಗಳು 68 ಬಾರಿ ಮಚ್ಚಿನಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಾಗಡಿ ರಸ್ತೆಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಕಳೆದ ಮಾರ್ಚ್ 9 ರಂದು ಕೊಲೆ ಆರೋಪಿ ಸಂತೋಷ್ ಎಂಬಾತನ ಮೇಲೆ ಶರತ್ ಮತ್ತು ಗ್ಯಾಂಗ್ ಅಟ್ಯಾಕ್ ಮಾಡಿದೆ.
ನಾಲ್ವರು ಯುವಕರು ಕೊಲೆ ಆರೋಪಿ ಸಂತೋಷ್ ಮೇಲೆ ಅಟ್ಯಾಕ್ ಮಾಡಿದ್ದಾರೆ. 2024ರಲ್ಲಿ ಕೊಳ್ಳೇಗಾಲದ ಮೋಹನ್ ಎಂಬಾತ ಕೊಲೆ ಆಗಿರುತ್ತಾನೆ. ಮೋಹನ್ ಹಾಗೂ ಅಟ್ಯಾಕ್ ಮಾಡಿದಂತ ಶರತ್ ಇಬ್ಬರೂ ಕೂಡ ಸಹೋದರರಾಗಿರುತ್ತಾರೆ, ತನ್ನ ಸಹೋದರರ ಪ್ರತಿಕಾರವಾಗಿ ಶರತ್ ಸಂತೋಷ್ ಮೇಕೆ ಈ ಒಂದು ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








