ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಲೆ ಮಹದೇಶ್ವರ ಬೆಟ್ಟದ ಆನೆ ತಲೆದಿಂಬದ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ರಸ್ತೆಯ ಇಳಿಜಾರಿನ ತಿರುವಿನಲ್ಲಿ ಚಿರತೆ ತಡೆಗೋಡೆ ಪಕ್ಕದಲ್ಲಿ ಕೂತಿತ್ತು. ವಾಹನದಲ್ಲಿ ತೆರಳುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಚಿರತೆ ಇರುವ ದೃಶ್ಯ ಸೆರೆಯಾಗಿದೆ. ಶಿವರಾತ್ರಿ ಜಾತ್ರೆಯ ವೇಳೆ ಚಿರತೆ ಪಾದಯಾತ್ರೀಕನನ್ನು ಕೊಂದು ತಿಂದಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ.








