ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯ ಮಲ್ಲೇಶ್ವರಂ ವಿಭಾಗದಲ್ಲಿರುವ ಪಿ.ಜಿ. ಹಳ್ಳಿ ಆರೋಗ್ಯ ಕೇಂದ್ರ ಮತ್ತು ನಾಗಪ್ಪ ಬ್ಲಾಕ್ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಪಿಸ್ಟ್ (2) ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯನ್ನು ಇದೇ ಮಾರ್ಚ್ 10ರಂದು ವಾಕ್-ಇನ್ ಪ್ರಕ್ರಿಯೆಯ ಮೂಲಕ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ನಡೆಸಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಖುದ್ದಾಗಿ ಆರೋಗ್ಯಾಧಿಕಾರಿ (ಪಶ್ಚಿಮ) ಅವರ ಕಚೇರಿಗೆ ಸಲ್ಲಿಸಬೇಕು.
ಕಚೇರಿ ವಿಳಾಸ: ಪಾಲಿಕೆ ಸೌಧ, 2ನೇ ಮಹಡಿ, ಸಿದ್ದಗಂಗಾ ಸ್ಕೂಲ್ ರಸ್ತೆ, 14ನೇ ಅಡ್ಡರಸ್ತೆ, ಚಂದ್ರಲೇಔಟ್ 1ನೇ ಹಂತ, ಬೆಂಗಳೂರು.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 7892158262
BREAKING: ಬೆಂಗಳೂರಲ್ಲಿ ಯುವಕನ ಮೇಲೆ ಭೀಕರ ಹಲ್ಲೆ; ಇಬ್ಬರು ದುಷ್ಕರ್ಮಿಗಳಿಂದ ಡೆಡ್ಲಿ ಅಟ್ಯಾಕ್
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ








