ಶಿವಮೊಗ್ಗ : ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಬದಲಾದ ದಿನಮಾನಗಳಿಗೆ ತಕ್ಕಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜನ್ಮದಿನ ಆಚರಿಸುವಾಗ ತಿರಸ್ಕರಿಸಲು ಆಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದಂತ ಅವರು, ನನ್ನ ಜನ್ಮದಿನವನ್ನು ಸಮಾಜಮುಖಿ ಕೆಲಸಗಳ ಜೊತೆ ಅಭಿಮಾನಿಗಳು ಆಚರಿಸುತ್ತಿರುವುದು ಸಂತೋಷ ತಂದಿದೆ. ಜನ್ಮದಿನದ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕಾರ್ಯಕರ್ತರು ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹೊಸನಗರ, ಸಾಗರದ ಗೋಶಾಲೆಗಳಿಗೆ ಮಹಿಳಾ ಮೋರ್ಚಾದ ವತಿಯಿಂದ ಮೇವು ನೀಡಲಾಗಿದೆ. ಯುವ ಮೋರ್ಚಾ ರಕ್ತದಾನ ಶಿಬಿರ ನಡೆಸುವ ಮೂಲಕ ಅನುಕರಣೀಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಹರತಾಳು ಹಾಲಪ್ಪ ಅವರು ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಅನುಕರಣೀಯ ಹಾದಿ ಹಾಕಿಕೊಟ್ಟಿದ್ದಾರೆ. ರಕ್ತದಾನದಂತಹ ಶ್ರೇಷ್ಟ ಕೆಲಸ ಜನ್ಮದಿನದ ಸಂದರ್ಭದಲ್ಲಿ ಮಾಡುತ್ತಿರುವುದು ಹೆಚ್ಚು ಅಗತ್ಯ. ಹಾಲಪ್ಪ ಅವರ ಅಭಿವೃದ್ದಿಪರ ಆಲೋಚನೆಗಳಿಗೆ ಸದಾ ಯಶಸ್ಸು ಸಿಗಬೇಕು ಎಂದು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿ, ಹಾಲಪ್ಪ ಅವರ ಅಭಿವೃದ್ದಿಪರ ಕೆಲಸ ಎಲ್ಲರೂ ಮೆಚ್ಚುವಂತಹದ್ದು. ಅವರು ಮುಂದಿನ ಅವಧಿಗೆ ಶಾಸಕರಾಗಿ, ಸಚಿವರಾಗಿ ಕ್ಷೇತ್ರವನ್ನು ಅಭಿವೃದ್ದಿಪಥದತ್ತ ತೆಗೆದುಕೊಂಡು ಹೋಗಬೇಕು. ಅವರ ಜನ್ಮದಿನದ ಅಂಗವಾಗಿ ಪಕ್ಷ ಹಾಗೂ ಅಭಿಮಾನಿಗಳು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಪರಶುರಾಮ್, ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ಬಿ.ಟಿ.ರವೀಂದ್ರ, ಸತೀಶ್ ಕೆ., ಗಾಯತ್ರಿ ಮಲ್ಲೇಶಪ್ಪ, ಮೈತ್ರಿ ಪಾಟೀಲ್ ಇನ್ನಿತರರು ಹಾಜರಿದ್ದರು.
ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ
ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯ ಪರಿಕಲ್ಪನೆಯನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿದೆ: ತೀ.ನ.ಶ್ರೀನಿವಾಸ್ ಕಿಡಿ








