ಬೆಂಗಳೂರು: ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿವಿಧ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 14 ಜನ ತಹಶೀಲ್ದಾರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಂದಾಯ ಇಲಾಖೆಗೆ ಹಿಂಪಡೆದು ಆದೇಶ ಹೊರಡಿಸಿದೆ.
ಮಾರ್ಚ್ 06, 2026ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಮಾತೃ ಇಲಾಖೆಗೆ ಮರಳಿರುವ ಈ ಎಲ್ಲಾ ಅಧಿಕಾರಿಗಳು ಕೂಡಲೇ ತಮ್ಮ ಪ್ರಸ್ತುತ ಹುದ್ದೆಗಳಿಂದ ಬಿಡುಗಡೆಗೊಂಡು, ಕಂದಾಯ ಇಲಾಖೆಯ (ಸೇವೆಗಳು-3) ಶಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕಂದಾಯ ಇಲಾಖೆಗೆ ಮರಳಿದ ಅಧಿಕಾರಿಗಳ ವಿವರ:
ರಾಘವಿ ವಿನೋದ ನಾಯಕ: ಯೋಜನಾ ಅಧಿಕಾರಿ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (NULM), ಬೆಂಗಳೂರು.
ದೊರೆಸ್ವಾಮಿ: ತಹಶೀಲ್ದಾರ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ, ಬೆಂಗಳೂರು.
ಬಿ.ಎಂ. ಸಂಜನಾ: ಆಡಳಿತಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು.
ಸೋಮಶೇಖರ್: ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಬೆಳಗಾವಿ.
ಮಲ್ಲಿಕಾರ್ಜುನ ಎಸ್. ಅರಕೇರಿ: ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ವಿಜಯಪುರ.
ಹೆಚ್. ಹೊನ್ನಮ್ಮ: ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಬಳ್ಳಾರಿ.
ಸಾವಿತ್ರಿ ಸಲಗಾರ: ತಹಶೀಲ್ದಾರ್, KUIDFC.
ಸೌಮ್ಯ: ತಹಶೀಲ್ದಾರ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ (KREDEL), ಬೆಂಗಳೂರು.
ಶಿವಕುಮಾರ್ ಬಿರಾದಾರ: ವಿಶೇಷ ಭೂ ಸ್ವಾಧಿನಾಧಿಕಾರಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL), ಬೆಂಗಳೂರು.
ಯು. ವಸಂತಕುಮಾರಿ: ವಿಶೇಷ ಭೂ ಸ್ವಾಧಿನಾಧಿಕಾರಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL), ಬೆಂಗಳೂರು.
ವಿನೋದ ಟಿ.: ತಹಶೀಲ್ದಾರ್, ನಗರ ಸಮೀಕ್ಷೆ ಯೋಜನೆ, ಮೈಸೂರು.
ಚನ್ನವೀರಭದ್ರಯ್ಯ: ಆಡಿಟ್ ಆಫೀಸರ್, ಕಾವೇರಿ ನೀರಾವರಿ ನಿಗಮ, ಮೈಸೂರು.
ವಿಜಯೇಂದ್ರ ಹುಲಿ ನಾಯ್ಕ: ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ಯಾದಗಿರಿ.
ಹಾಗೂ ಕರ್ನಾಟಕ ರಾಜ್ಯ ಖನಿಜಗಳ ನಿಗಮದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ (ಆಡಳಿತ) ಓರ್ವ ತಹಶೀಲ್ದಾರ್ (ಗ್ರೇಡ್-2) ಸೇರಿದಂತೆ ಒಟ್ಟು 14 ಜನರನ್ನು ಹಿಂಪಡೆಯಲಾಗಿದೆ.









