Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಒಂದೇ ಫೋನ್ ನಂಬರ್ ಎಲ್ಲೆಡೆ ಬಳಸ್ತಿದ್ದೀರಾ? ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು

03/05/2026 9:44 AM

ಪ್ರತಿ ತಿಂಗಳು `ಕರೆಂಟ್ ಬಿಲ್’ ಶೂನ್ಯ.. ಜೊತೆಗೆ ಅಕೌಂಟ್ ಗೆ ₹78,000 ಸಬ್ಸಿಡಿ! ಏನಿದು ಕೇಂದ್ರದ ಭರ್ಜರಿ ಯೋಜನೆ?

03/05/2026 9:36 AM

​ನೀತಿ ಆಯೋಗಕ್ಕೆ ಹೊಸ ಬಲ: ಇಬ್ಬರು ಪೂರ್ಣಕಾಲಿಕ ಸದಸ್ಯರನ್ನು ನೇಮಿಸಿದ ಪ್ರಧಾನಿ ಮೋದಿ!

03/05/2026 9:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲ ನಗರಗಳಲ್ಲಿ ಇನ್ನು `ಏಕೀಕೃತ ಆಸ್ತಿ ತೆರಿಗೆ’ : ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಜಾರಿ !
KARNATAKA

ರಾಜ್ಯದ ಎಲ್ಲ ನಗರಗಳಲ್ಲಿ ಇನ್ನು `ಏಕೀಕೃತ ಆಸ್ತಿ ತೆರಿಗೆ’ : ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಜಾರಿ !

By kannadanewsnow5707/03/2026 6:40 AM

ಬೆಂಗಳೂರು : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಏಕೀಕೃತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ನಗರಾಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ನಗರಾಭಿವೃದ್ಧಿ ಹಾಗೂ ಆಸ್ತಿ ನಿರ್ವಹಣೆ

ಏಕೀಕೃತ ಆಸ್ತಿ ತೆರಿಗೆ: ಇ-ಆಸ್ತಿ ತಂತ್ರಾಂಶದೊಂದಿಗೆ ಸಂಯೋಜಿಸಿ ಸ್ವಯಂ ಚಾಲಿತವಾಗಿ ತೆರಿಗೆ ಬೇಡಿಕೆ ಸೃಜಿಸುವ ‘ಯೂನಿಫೈಡ್ ಪ್ರಾಪರ್ಟಿ ಟ್ಯಾಕ್ಸ್’ (Unified Property Tax) ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.

ಹೊಸ ನಿಯಮ ಜಾರಿ: ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಅನ್ನು ಜಾರಿಗೆ ತರಲಾಗುತ್ತಿದೆ.

ಅಮೃತ್ ನಗರೋತ್ಥಾನ: ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ (ಹಂತ-4) ಮೂಲಸೌಕರ್ಯ ಅಭಿವೃದ್ಧಿಗೆ ಈ ಸಾಲಿನಲ್ಲಿ ₹500 ಕೋಟಿ ಅನುದಾನ ಮೀಸಲಿಡಲಾಗಿದೆ.

ಮೂಲಸೌಕರ್ಯ ಮತ್ತು ಕುಡಿಯುವ ನೀರು
ಬೆಂಗಳೂರಿಗೆ ಭರ್ಜರಿ ಅನುದಾನ: ರಾಜಧಾನಿಯ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ₹5000 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಬಿಎಂಆರ್‌ಡಿಎ ಹಾಗೂ ಸ್ಥಳೀಯ ಪ್ರಾಧಿಕಾರಗಳ ಮೂಲಕ ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆ ನಿರ್ಮಾಣ.

ಕಲಬುರಗಿಗೆ ಶಾಶ್ವತ ಶುದ್ಧ ನೀರು: ಕಲಬುರಗಿ ನಗರಕ್ಕೆ 24/7 ಶಾಶ್ವತವಾಗಿ ಗುಣಮಟ್ಟದ ಕುಡಿಯುವ ನೀರು ಒದಗಿಸಲು ₹1,863 ಕೋಟಿ ವೆಚ್ಚದ ಬೃಹತ್ ಯೋಜನೆ.

ಒಳಚರಂಡಿ ಕಾಮಗಾರಿಗಳು: ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಅನ್ನಿಗೇರಿ, ಗುಂಡ್ಲುಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಒಳಚರಂಡಿ ಕಾಮಗಾರಿ. ಕಲ್ಯಾಣ ಕರ್ನಾಟಕ ಮಂಡಳಿಯ ಅನುದಾನದಲ್ಲಿ ಆಳಂದ, ಅಫ್ಜಲ್‌ಪುರ, ಚಿತ್ತಾಪುರ ಸೇರಿ ಹಲವೆಡೆ ಕಾಮಗಾರಿ.

ವಿದ್ಯಾರ್ಥಿಗಳಿಗೆ ಹಾಗೂ ಪರಿಸರಕ್ಕೆ ಆದ್ಯತೆ
ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್: ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಧಾರವಾಡದಲ್ಲಿ 4 ಹಾಗೂ ಬೆಂಗಳೂರಿನಲ್ಲಿ 2 ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳ ಆರಂಭ.

ಮಿಯಾವಾಕಿ ಉದ್ಯಾನವನ: ರಾಜ್ಯದ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಸ್ಯಗಳನ್ನು ದಟ್ಟವಾಗಿ ಬೆಳೆಸಿ ನೈಸರ್ಗಿಕ ಹಸಿರು ಹೆಚ್ಚಿಸಲು 100 ‘ಮಿಯಾವಾಕಿ ಪಾರ್ಕ್’ಗಳ ನಿರ್ಮಾಣ.

ಇತರೆ ಪ್ರಮುಖ ಅನುದಾನಗಳು
ಮೈಸೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2.0 ಅಡಿ ತಲಾ ₹200 ಕೋಟಿ ಅನುದಾನ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನ.

 

Unified Property Tax in all cities of the state: 'The Estate Management Rules-2026' implemented!
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು 7ನೇ ತರಗತಿ ವಿದ್ಯಾರ್ಥಿನಿ ಸಾವು.!

03/05/2026 9:30 AM1 Min Read

SHOCKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಮಾಟ-ಮಂತ್ರದ ಹೆಸರಲ್ಲಿ ಮಹಿಳೆ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!

03/05/2026 9:02 AM1 Min Read

BREAKING : ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ `FIR’ ದಾಖಲು

03/05/2026 8:48 AM1 Min Read
Recent News

​ಒಂದೇ ಫೋನ್ ನಂಬರ್ ಎಲ್ಲೆಡೆ ಬಳಸ್ತಿದ್ದೀರಾ? ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು

03/05/2026 9:44 AM

ಪ್ರತಿ ತಿಂಗಳು `ಕರೆಂಟ್ ಬಿಲ್’ ಶೂನ್ಯ.. ಜೊತೆಗೆ ಅಕೌಂಟ್ ಗೆ ₹78,000 ಸಬ್ಸಿಡಿ! ಏನಿದು ಕೇಂದ್ರದ ಭರ್ಜರಿ ಯೋಜನೆ?

03/05/2026 9:36 AM

​ನೀತಿ ಆಯೋಗಕ್ಕೆ ಹೊಸ ಬಲ: ಇಬ್ಬರು ಪೂರ್ಣಕಾಲಿಕ ಸದಸ್ಯರನ್ನು ನೇಮಿಸಿದ ಪ್ರಧಾನಿ ಮೋದಿ!

03/05/2026 9:34 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು 7ನೇ ತರಗತಿ ವಿದ್ಯಾರ್ಥಿನಿ ಸಾವು.!

03/05/2026 9:30 AM
State News
KARNATAKA

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು 7ನೇ ತರಗತಿ ವಿದ್ಯಾರ್ಥಿನಿ ಸಾವು.!

By kannadanewsnow5703/05/2026 9:30 AM KARNATAKA 1 Min Read

ಜೋಯಿಡಾ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ, ಉತ್ತರ ಕನ್ನಡ…

SHOCKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಮಾಟ-ಮಂತ್ರದ ಹೆಸರಲ್ಲಿ ಮಹಿಳೆ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!

03/05/2026 9:02 AM

BREAKING : ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ `FIR’ ದಾಖಲು

03/05/2026 8:48 AM

SHOCKING: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಹಾವು ಕಚ್ಚಿ ಸಾವು

03/05/2026 8:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.