ನವದೆಹಲಿ : ತಾಂತ್ರಿಕ ಸಮಸ್ಯೆಗಳನ್ನ ಉಲ್ಲೇಖಿಸಿ ಟೆಹ್ರಾನ್ ತುರ್ತಾಗಿ ಬೆಂಬಲ ಕೋರಿದ ನಂತರ, ಭಾರತವು ತನ್ನ ನೌಕಾ ಹಡಗುಗಳಲ್ಲಿ ಒಂದಾದ ಐಆರ್ಐಎಸ್ ಲವನ್’ನ್ನು ಕೇರಳದ ಕೊಚ್ಚಿಯಲ್ಲಿ ಡಾಕಿಂಗ್ ಮಾಡಲು ಅವಕಾಶ ನೀಡುವ ಮೂಲಕ ಸದ್ದಿಲ್ಲದೆ ಇರಾನ್’ಗೆ ಸಹಾಯ ಮಾಡಿದೆ. ಹಿಂದೂ ಮಹಾಸಾಗರದಲ್ಲಿ ಮತ್ತೊಂದು ಇರಾನಿನ ಯುದ್ಧನೌಕೆ ಐಆರ್ಐಎಸ್ ದೇನಾ ಮುಳುಗುವ ಕೆಲವೇ ದಿನಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ.
ಭಾರತ ಸರ್ಕಾರದ ಮೂಲಗಳ ಪ್ರಕಾರ, ಮಾರ್ಚ್ 4ರಿಂದ ಇರಾನಿನ ಹಡಗನ್ನು ಕೊಚ್ಚಿಯಲ್ಲಿ ನಿಲ್ಲಿಸಲಾಗಿದ್ದು, ಅದರ ಸಂಪೂರ್ಣ ಸಿಬ್ಬಂದಿಗೆ ಭಾರತೀಯ ನೌಕಾ ಸೌಲಭ್ಯಗಳಲ್ಲಿ ವಸತಿ ಒದಗಿಸಲಾಗಿದೆ.
ತಾಂತ್ರಿಕ ಸಮಸ್ಯೆಗಳಿಂದಾಗಿ ಹಡಗನ್ನು ಕೊಚ್ಚಿಯಲ್ಲಿ ಡಾಕಿಂಗ್ ಮಾಡಲು ಅನುಮತಿ ಕೋರಿ ಫೆಬ್ರವರಿ 28ರಂದು ಭಾರತಕ್ಕೆ ಇರಾನ್’ನಿಂದ ವಿನಂತಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪತ್ನಿ, ಮಕ್ಕಳ ಪೋಷಣೆಗಾಗಿ ಪುರುಷನ ಸಂಬಳದಿಂದ 25,000 ರೂ. ಕಡಿತಗೊಳಿಸಿ ಉದ್ಯೋಗದಾತರಿಗೆ ‘ಸುಪ್ರೀಂ’ ನಿರ್ದೇಶನ
“ಕ್ಯೂಬಾ ಶೀಘ್ರದಲ್ಲೇ ಪತನಗೊಳ್ಳಲಿದೆ” : ಇರಾನ್ ಯುದ್ಧದ ನಡುವೆ ಟ್ರಂಪ್ ದೊಡ್ಡ ಹೇಳಿಕೆ!
ಚಿತ್ರದುರ್ಗ: KSRTC ಬಸ್- ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು







