ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಲ್ಲದ ಕೃಷ್ಣಪ್ಪ ಅವರ ಮಗ ನಾಗರಾಜ್ ಎಂಬುವರ ಪುತ್ರ ನಿತಿನ್ ಈ ದುರ್ಘಟನೆಗೆ ಬಲಿಯಾದವರು. ಶಿವಮೊಗ್ಗದಿಂದ ಆಗಮಿಸುತ್ತಿದ್ದ ರೈಲು ಪಟ್ಟಣ ತಲುಪುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಲೋಕೋ ಪೈಲಟ್‌ನವರು ತುರ್ತು ಬ್ರೇಕ್ ಹಾಕಿದರೂ ನಿತಿನ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರೈಲು ಅವರ ಕುತ್ತಿಗೆಯ ಮೇಲೆ ಹರಿದಿದ್ದರಿಂದ ರುಂಡ ದೇಹದಿಂದ ಬೇರ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿತಿನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ದುರ್ಘಟನೆಯಿಂದಾಗಿ ರೈಲು ಕೆಲಕಾಲ ಸ್ಥಳದಲ್ಲೇ ನಿಲ್ಲುವಂತಾಗಿತ್ತು. ಸಾಗರ ಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವಕನ ಆತ್ಮಹತ್ಯೆ ಸಾಗರ ನಗರದಲ್ಲಿ ಆತಂಕ ಮೂಡಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನಿರಬಹುದು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಸಾಗರದ ಮಾರಿಗುಡಿ ಸಮಿತಿಗೆ ಚುನಾವಣೆ: ಹಿತರಕ್ಷಣಾ ವೇದಿಕೆ ತಂಡಕ್ಕೆ ಬಹುಮತ ನಿರೀಕ್ಷೆ – ಸಂಚಾಲಕ ಎಂ.ಡಿ ಆನಂದ್








