ರಾಯಚೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮುತ್ತಿರುವ ‘ಪ್ರಜಾ ಸಮರ’ ಪತ್ರಿಕೆಯು ಈಗ ತನ್ನದೇ ಆದ ನೂತನ ಮುದ್ರಣಾಲಯದೊಂದಿಗೆ ಹೊಸ ಆಯಾಮಕ್ಕೆ ತೆರೆದುಕೊಂಡಿದೆ. ನಗರದ ಹೊರವಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ, ಪತ್ರಿಕೆಯ ನೂತನ ಮುದ್ರಣ ಯಂತ್ರಕ್ಕೆ ಚಾಲನೆ ನೀಡುವ ಮೂಲಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಖ್ಯಾತ ಕವಿಗಳಾದ ಚಿದಾನಂದ ಸಾಲಿ ಅವರು ಮುದ್ರಣ ಯಂತ್ರಕ್ಕೆ ವಿಧಿವತ್ತಾಗಿ ಚಾಲನೆ ನೀಡಿ ಮಾತನಾಡಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮುದ್ರಣ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳ ನಡುವೆಯೂ, ಸ್ವಂತ ಮುದ್ರಣಾಲಯ ಸ್ಥಾಪಿಸಿ ಪತ್ರಿಕೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಪ್ರಜಾ ಸಮರ ಪತ್ರಿಕೆಯು ಜನಪರ ಕಾಳಜಿಯೊಂದಿಗೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರಿ ಅವರು ಪತ್ರಿಕೆಯ ಬಿಡುಗಡೆ ನೆರವೇರಿಸಿ ಮಾತನಾಡಿ ನೌಕರರ ಸಮಸ್ಯೆಗಳಿರಲಿ ಅಥವಾ ಸಮಾಜದ ತಳಮಟ್ಟದ ಜನರ ಧ್ವನಿಯಾಗಿರಲಿ, ಪತ್ರಿಕೆಗಳು ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಪ್ರಜಾ ಸಮರ ಪತ್ರಿಕೆಯು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಿ ವಿವಿಧ ಕ್ಷೇತ್ರಗಳ ಮುಖಂಡರಾದ ಶಿವಣ್ಣ ನಾಯಕ, ಗುಂಡಪ್ಪ ಸಾಹುಕಾರ್, ಯಂಕೋಬ, ನವಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಎಲ್ಲರೂ ಪತ್ರಿಕೆಯ ಈ ಹಂತದ ಬೆಳವಣಿಗೆಯನ್ನು ಅಭಿನಂದಿಸಿ, ಮುಂಬರುವ ದಿನಗಳಲ್ಲಿ ‘ಪ್ರಜಾ ಸಮರ’ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಪ್ರಜಾ ಸಮರ ಪತ್ರಿಕೆಯ ಸಂಪಾದಕರಾದಂತ ಲಿಂಗರಾಜ್ ಅವರು, ಪತ್ರಿಕೆಯು ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ವೇಗವಾಗಿ ಹಾಗೂ ನಿಖರವಾಗಿ ಓದುಗರಿಗೆ ತಲುಪುವ ಭರವಸೆ ನೀಡಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ
BREAKING: ಅಸ್ಸಾಂನಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡ ಸುಖೋಯ್-30MKI ಯುದ್ಧ ವಿಮಾನ; ಶೋಧ ಕಾರ್ಯ ಆರಂಭ








