ಬೆಂಗಳೂರು: ರಾಜ್ಯದ ಸಾರಿಗೆ ನಿಗಮಗಳ ಸದ್ಯದ ದುಸ್ಥಿತಿಯ ಕುರಿತು ಜನತಾದಳ (ಜಾತ್ಯತೀತ) ಪಕ್ಷವು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ “ಗ್ಯಾರಂಟಿ ಹಪಾಹಪಿ”ಯಿಂದಾಗಿ ಸಾರಿಗೆ ಇಲಾಖೆ ಸಂಪೂರ್ಣವಾಗಿ ಕುಸಿದು ‘ಐಸಿಯು’ ಸೇರಿದೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಿಡಿಕಾರಿದೆ.
“ಒಂದು ಕೈಯಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಲಕ್ಷಾಂತರ ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಈ ಸರ್ಕಾರ ಮಾಡುತ್ತಿದೆ” ಎಂದು ಜೆಡಿಎಸ್ ಆರೋಪಿಸಿದೆ. ಶಕ್ತಿ ಯೋಜನೆಯ ಅಬ್ಬರದಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಶಕ್ತಿಯೇ ಉಡುಗಿಹೋಗಿದ್ದು, ನೌಕರರ ಭವಿಷ್ಯ ನಿಧಿಗೂ (PF) ಕುತ್ತು ಬಂದಿದೆ ಎಂದು ಪಕ್ಷ ಕಳವಳ ವ್ಯಕ್ತಪಡಿಸಿದೆ.
ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು (MD) ಪತ್ರ ಬರೆದು ಹಣ ಕೇಳುವಂತಹ ಸ್ಥಿತಿ ಬಂದಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸರ್ಕಾರದ ತಪ್ಪಾದ ನಿರ್ಧಾರಗಳಿಂದಾಗಿ ಸಾರಿಗೆ ಸಂಸ್ಥೆಗಳು ಇಂದು ಆರ್ಥಿಕವಾಗಿ ದಿವಾಳಿಯಾಗುತ್ತಿವೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ವಾಗ್ದಾಳಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಗುರಿಯಾಗಿಸಿಕೊಂಡಿರುವ ಜೆಡಿಎಸ್, “ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು ‘ಅಭಿವೃದ್ಧಿ’ ಎಂದು ಬುರುಡೆ ಬಿಡುತ್ತಿರುವುದು ಹಾಸ್ಯಾಸ್ಪದ. ಮೊದಲು ದಿವಾಳಿಯ ಅಂಚಿನಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಉಳಿಸಿ,” ಎಂದು ನೇರವಾಗಿ ಆಗ್ರಹಿಸಿದೆ.
ಭ್ರಷ್ಟ @INCKarnataka ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ 'ಐಸಿಯು' ಸೇರಿದೆ !
ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ನೌಕರರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಮೂರು ವರ್ಷಗಳಿಂದ @siddaramaiah ನೇತೃತ್ವದ ಸರ್ಕಾರ ಮಾಡುತ್ತಿದೆ.
ಶಕ್ತಿ ಯೋಜನೆಯ ಅಬ್ಬರದಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಶಕ್ತಿಯೇ ಉಡುಗಿಹೋಗಿದ್ದು,… pic.twitter.com/puZuzl4BR2
— Janata Dal Secular (@JanataDal_S) March 5, 2026
SHOCKING: ರಸ್ತೆಯಲ್ಲೇ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು
ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ – ಬಿಕಾನೆರ್ ನಡುವೆ ವಿಶೇಷ ರೈಲು ಸಂಚಾರ








