Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳಿನ ಬಜೆಟ್ ನಲ್ಲಿ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ ಅನಗತ್ಯ ವೆಚ್ಚ ಕಡಿತಗೊಳಿಸುವ ಸಾಧ್ಯತೆ!
KARNATAKA

BIG NEWS : ನಾಳಿನ ಬಜೆಟ್ ನಲ್ಲಿ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ ಅನಗತ್ಯ ವೆಚ್ಚ ಕಡಿತಗೊಳಿಸುವ ಸಾಧ್ಯತೆ!

By ಸುರೇಶ್‌

ಬೆಂಗಳೂರು : 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸೀಮಿತ ಸಂಪನ್ಮೂಲ, ಅಗಾಧ ರಾಜಸ್ವ ವೆಚ್ಚದ ನಡುವೆ ಸಿಎಂ ಸಿದ್ದರಾಮಯ್ಯ ಮಾ.6ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಬಿಗುವಿನ ಹಣಕಾಸು ಸ್ಥಿತಿಯಲ್ಲಿ ಹಣಕಾಸು ಆಯೋಗದಿಂದ ಹೆಚ್ಚಿನ ತೆರಿಗೆ ಪಾಲು ತುಸು ನಿಟ್ಟುಸಿರು ಬಿಡುವಂತೆ ಮಾಡಿದರೆ, ಮಿತಿ ಮೀರಿದ ರಾಜಸ್ವ ವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಮುಂದಿದೆ.

ರಾಜ್ಯ ಸರ್ಕಾರದ ಹಣಕಾಸಿಗೆ ದೊಡ್ಡ ಹೊರೆಯಾಗಿರುವುದು ಪಂಚ ಗ್ಯಾರಂಟಿ. ಕಳೆದ 3 ಬಜೆಟ್​ಗಳಲ್ಲಿ ಪಂಚ ಗ್ಯಾರಂಟಿಗಾಗಿ ಸುಮಾರು 1.38 ಲಕ್ಷ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. 2023-24ನೇ ಸಾಲಿನ‌ ಬಜೆಟ್​ನಲ್ಲಿ 35,410 ಕೋಟಿ ರೂ. 2024-25ನೇ ಸಾಲಿನಲ್ಲಿ 52,009 ಕೋಟಿ ರೂ. 2025-26ನೇ ಸಾಲಿನಲ್ಲಿ 51,034 ಕೋಟಿ ರೂ. ಹಂಚಿಕೆ ಮಾಡಲಾಗಿದೆ‌.

ಸೀಮಿತ ಆದಾಯ ಮೂಲಗಳಿಂದ ಪಂಚ ಗ್ಯಾರಂಟಿ ಹೊರೆ ಭರಿಸುವುದು ದೊಡ್ಡ ಕಗ್ಗಂಟಾಗಿ ಪರಿಣಮಿಸುತ್ತಿದೆ. ಹೀಗಾಗಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿನ ಅನಗತ್ಯ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆ ಬಗ್ಗೆ ಆರ್ಥಿಕ ಇಲಾಖೆ ಜೊತೆ ಸಿಎಂ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 16ನೇ ಹಣಕಾಸು ಆಯೋಗ ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲಿನ ಹಂಚಿಕೆಯನ್ನು 4.13ಕ್ಕೆ ಹೆಚ್ಚಳ ಮಾಡಿದೆ.

ಅದರ ಹಿಂದಿನ ಅಂದರೆ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶೇ 3.65ರಷ್ಟು ತೆರಿಗೆ ಪಾಲನ್ನು ಹಂಚಿಕೆ ಮಾಡಿತ್ತು. ಅದರಂತೆ ರಾಜ್ಯಕ್ಕೆ ವಾರ್ಷಿಕ 55,663 ಕೋಟಿ ರೂ. ತೆರಿಗೆ ಪಾಲು ಹಂಚಿಕೆ ಆಗುತ್ತಿತ್ತು. ಇದೀಗ 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 63,050 ಕೋಟಿ ರೂ. ತೆರಿಗೆ ಪಾಲನ್ನು ಹಂಚಿಕೆ ಮಾಡಿದೆ. ಈ ಹೆಚ್ಚುವರಿ ತೆರಿಗೆ ಪಾಲಿನಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭಿಸಲಿದೆ. ಹೀಗಾಗಿ, ಅಷ್ಟರ ಮಟ್ಟಿಗೆ ಬಿಗುವಿನ ರಾಜ್ಯದ ಹಣಕಾಸು ಸ್ಥಿತಿ ಸಡಿಲವಾಗಲಿದೆ.

ಬಿಗಿ ಹಣಕಾಸು ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯಗೆ 2026-27ನೇ ಸಾಲಿನಲ್ಲಿ ತುಸು ನಿಟ್ಟುಸಿರು ಬಿಡುವಂತೆ ಮಾಡಿರುವುದು 16ನೇ ಹಣಕಾಸು ಆಯೋಗದಿಂದ ಹೆಚ್ಚಿನ‌ ತೆರಿಗೆ ಪಾಲಿನ ಶಿಫಾರಸು.‌ 16ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಆ ಮೂಲಕ 7,387 ಕೋಟಿ ರೂ.ರಷ್ಟು ಹೆಚ್ಚುವರಿ ಅನುದಾನ ಲಭಿಸಲಿದೆ. ಇದು ಹಣಕಾಸು ಸಂಕಷ್ಟದ ಸ್ಥಿತಿಯಲ್ಲಿ ರಾಜ್ಯಕ್ಕೆ ತುಸು ಉಸಿರು ಬಿಡುವಂತೆ ಮಾಡಿದೆ.

ಸಿಎಂ‌ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್​ಗೆ ಕಳೆದ ಒಂದು ತಿಂಗಳಿಂದ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿ, ಇದೀಗ ಅಂತಿಮ‌ ರೂಪ ನೀಡುತ್ತಿದ್ದಾರೆ. ಮಾ. 6ಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಗಿ ಹಣಕಾಸು ಸ್ಥಿತಿ, ಆದಾಯ ಸಂಗ್ರಹದ ಕೊರತೆ, ಹೆಚ್ಚುವರಿ ಹೊರೆಯ ಮಧ್ಯೆ ಈ ಬಾರಿ ಬಜೆಟ್ ಮಂಡನೆ ಸಿಎಂ ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯೇ ಸರಿ. ಬಂಡವಾಳ ವೆಚ್ಚ ಹಾಗೂ ಅಗಾಧ ರಾಜಸ್ವ ವೆಚ್ಚದ ಮಧ್ಯೆ ಸಮತೋಲನ ಕಾಪಾಡಿ ಹಣಕಾಸು ನಿರ್ವಹಣೆ ಮಾಡುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಮೇಲಿದೆ‌.

Share. Facebook Twitter LinkedIn WhatsApp Email

Related Posts

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

2 Mins Read

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

1 Min Read

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

1 Min Read
Recent News

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

Eat Garlic Daily: ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಅಚ್ಚರಿಯ ಮಾಹಿತಿ!

State News
KARNATAKA

ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆ: ಗುರುಭವನ ನಿರ್ಮಾಣಕ್ಕೆ ಸಂಕಲ್ಪ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆಯ ಅಧ್ಯಕ್ಷರಾಗಿ ಮಾಲತೇಶಪ್ಪ ಅವರು ಅವಿರೋಧವಾಗಿ…

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.