Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್‌ನಲ್ಲಿ ಗುಪ್ತ ಶಾಂತಿ ಮಾತುಕತೆ: ವೈಟ್‌ ಹೌಸ್ ಹೇಳಿದ್ದೇನು?

26/03/2026 8:09 AM

‘ಬಂಗಾಳದ ಮಹಿಳೆಯರ ಸುರಕ್ಷತೆಗಾಗಿ ನನ್ನ ಹೋರಾಟ’: ಚುನಾವಣಾ ಕಣಕ್ಕಿಳಿದ ಆರ್.ಜಿ. ಕರ್ ಸಂತ್ರಸ್ತೆಯ ತಾಯಿ, ಬಿಜೆಪಿ ಟಿಕೆಟ್ ಘೋಷಣೆ!

26/03/2026 7:58 AM

BREAKING : ಆಂಧ್ರಪ್ರದೇಶದಲ್ಲಿ ಮತ್ತೊಂದು ಘೋರ ದುರಂತ : ಬಸ್ ಹೊತ್ತಿ ಉರಿದು 10 ಪ್ರಯಾಣಿಕರು ಸಜೀವ ದಹನ !

26/03/2026 7:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ
KARNATAKA

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

By kannadanewsnow0905/03/2026 3:31 PM

ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಟೀಕೆ ಮಾಡುತ್ತಿರುವ ರತ್ನಾಕರ ಹೊನಗೋಡು ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರತ್ನಾಕರ ಅವರ ಹಳೆಯ ರಾಜಕೀಯ ಹಾದಿಯನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದರು. ಈ ಹಿಂದೆ ಗೋಪಾಲಕೃಷ್ಣ ಬೇಳೂರು ಅವರ ಬೆಂಬಲ ಇಲ್ಲದೇ ಇದ್ದರೇ ಅವರು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಯ ಸದಸ್ಯರೇ ಆಗುತ್ತಿರಲಿಲ್ಲ ಎಂಬುದಾಗಿ ನೆನಪಿಸಿದರು.

ಅಸ್ತಿತ್ವಕ್ಕಾಗಿ ಮಾಧ್ಯಮಗಳ ಮುಂದೆ ಅಬ್ಬರ

ರತ್ನಾಕರ ಹೊನಗೋಡು ಈ ಹಿಂದೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನೀಡಿದ ರಾಜಕೀಯ ಭಿಕ್ಷೆಯಿಂದ ಎಂಬುದು ಅವರಿಗೆ ಮೊದಲು ನೆನಪಿರಲಿ ಎಂದು ಚೇತರ್ ರಾಜ್ ಕಣ್ಣೂರು ಕುಟುಕಿದರು. ಶಾಸಕರ ಬೆಂಬಲದಿಂದ ಅಧಿಕಾರ ಪಡೆದವರು ಇಂದು ಅವರನ್ನೇ ಟೀಕಿಸುತ್ತಿರುವುದು ಕೃತಘ್ನತೆಯಿಲ್ಲದ ಪರಮಾವಧಿ ಎಂದು ಅವರು ಆಕ್ರೋಶ ಹೊರಹಾಕಿದರು.

ಬಿಜೆಪಿಯಲ್ಲಿ ಕನಿಷ್ಠ ಬೆಲೆಯೂ ಇಲ್ಲ

ರತ್ನಾಕರ ಹೊನಗೋಡು ಅವರು ಪ್ರಸ್ತುತ ಬಿಜೆಪಿಯಲ್ಲಿದ್ದರೂ ಅವರ ಸ್ಥಿತಿ ಶೋಚನೀಯವಾಗಿದೆ ಎಂದ ಅವರು, ಇಂದು ಸ್ವಂತ ಪಕ್ಷವಾದ ಬಿಜೆಪಿಯಲ್ಲಿಯೇ ಅವರಿಗೆ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ. ಅಲ್ಲಿ ಯಾರೂ ಅವರನ್ನು ಕರೆಯುತ್ತಿಲ್ಲ ಅಥವಾ ಕೇಳುತ್ತಿಲ್ಲ. ಹೀಗಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಜನರ ಗಮನ ಸೆಳೆಯಲು ಅವರು ಮಾಧ್ಯಮಗಳ ಮುಂದೆ ಬಂದು ಅಬ್ಬರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸ್ವಯಂ ಘೋಷಿತ ನಾಯಕನ ಭ್ರಮೆ

ಕೇವಲ ಪತ್ರಿಕಾಗೋಷ್ಠಿಗಳನ್ನು ಮಾಡುತ್ತಾ, ಶಾಸಕರನ್ನು ಬೈಯುವ ಮೂಲಕ ದೊಡ್ಡ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ರತ್ನಾಕರ ಇದ್ದಾರೆ. ಅದು ಅವರ ಭ್ರಮೆಯಾಗಿದೆ. ಅವರ ಅತಿರೇಕದ ನಡವಳಿಕೆಯನ್ನು ತೋರಿಸುತ್ತದೆ ಎಂಬುದಾಗಿ ಕಿಡಿಕಾರಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್ ಲಾವಿಗೆರೆ, ರಮಾನಂದ ಸಾಗರ್, ಕಲೀಮುಲ್ಲಾ, ಉಮೇಶ್ ಎನ್., ಬಾಬುಲ್ ಸಾಬ್ರು, ರಮತುಲ್ಲಾ, ಗಜೇಂದ್ರ, ಲಿಂಗರಾಜ್, ಅಮೀರ್, ಅರುಣ್ ಗೌಡ್ರು, ವಿಜಯ್ ಗೌಡ್ರು, ಬಸವರಾಜ್, ಎಂಎಲ್‌ಎಶ್ವರ, ಸಿರಿಜಾನ್, ಮೋಹನ್, ಆಸಿಫ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

ರಾಜ್ಯದ ‘ಸರ್ಕಾರಿ PU ಕಾಲೇಜು ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ: ಮುಂದಿನ ವರ್ಷದಿಂದ ಉಚಿತವಾಗಿ ‘ಪಠ್ಯಪುಸ್ತಕ’ ವಿತರಣೆ

Share. Facebook Twitter LinkedIn WhatsApp Email

Related Posts

BIG NEWS : `ಮದ್ಯ ಮಾರಾಟ’ಕ್ಕೆ ವಯಸ್ಸಿನ ಪುರಾವೆ ಕಡ್ಡಾಯ: ಬಾರ್ ಮಾಲೀಕರಿಗೆ ಹೈಕೋರ್ಟ್ ಖಡಕ್ ಸೂಚನೆ !

26/03/2026 7:45 AM1 Min Read

Ram Navami 2025 : ಶ್ರೀರಾಮ ನವಮಿಯ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನದ ಸಂಪೂರ್ಣ ಮಾಹಿತಿ

26/03/2026 7:35 AM2 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರರ ಅಧಿಕಾರ ಅವಧಿ ವಿಸ್ತರಿಸಿ ಸರ್ಕಾರ ಆದೇಶ

26/03/2026 7:25 AM1 Min Read
Recent News

ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್‌ನಲ್ಲಿ ಗುಪ್ತ ಶಾಂತಿ ಮಾತುಕತೆ: ವೈಟ್‌ ಹೌಸ್ ಹೇಳಿದ್ದೇನು?

26/03/2026 8:09 AM

‘ಬಂಗಾಳದ ಮಹಿಳೆಯರ ಸುರಕ್ಷತೆಗಾಗಿ ನನ್ನ ಹೋರಾಟ’: ಚುನಾವಣಾ ಕಣಕ್ಕಿಳಿದ ಆರ್.ಜಿ. ಕರ್ ಸಂತ್ರಸ್ತೆಯ ತಾಯಿ, ಬಿಜೆಪಿ ಟಿಕೆಟ್ ಘೋಷಣೆ!

26/03/2026 7:58 AM

BREAKING : ಆಂಧ್ರಪ್ರದೇಶದಲ್ಲಿ ಮತ್ತೊಂದು ಘೋರ ದುರಂತ : ಬಸ್ ಹೊತ್ತಿ ಉರಿದು 10 ಪ್ರಯಾಣಿಕರು ಸಜೀವ ದಹನ !

26/03/2026 7:58 AM

ಟ್ರಂಪ್ ಕೇವಲ ಬೆದರಿಕೆ ಹಾಕುತ್ತಿಲ್ಲ, ದಾಳಿಗೆ ಸಿದ್ಧರಾಗಿದ್ದಾರೆ : ವಿನಾಶಕಾರಿ ದಾಳಿಯ ಬಗ್ಗೆ ಇರಾನ್‌ ಗೆ ವೈಟ್ ಹೌಸ್ ಎಚ್ಚರಿಕೆ

26/03/2026 7:53 AM
State News
KARNATAKA

BIG NEWS : `ಮದ್ಯ ಮಾರಾಟ’ಕ್ಕೆ ವಯಸ್ಸಿನ ಪುರಾವೆ ಕಡ್ಡಾಯ: ಬಾರ್ ಮಾಲೀಕರಿಗೆ ಹೈಕೋರ್ಟ್ ಖಡಕ್ ಸೂಚನೆ !

By kannadanewsnow5726/03/2026 7:45 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದನ್ನು ತಡೆಯಲು ಮತ್ತು ಮದ್ಯ ಖರೀದಿ ಮಾಡುವವರ ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ…

Ram Navami 2025 : ಶ್ರೀರಾಮ ನವಮಿಯ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಾನದ ಸಂಪೂರ್ಣ ಮಾಹಿತಿ

26/03/2026 7:35 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರರ ಅಧಿಕಾರ ಅವಧಿ ವಿಸ್ತರಿಸಿ ಸರ್ಕಾರ ಆದೇಶ

26/03/2026 7:25 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪೌತಿ ಖಾತೆ’ ಬದಲಾವಣೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

26/03/2026 7:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.