Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

28/04/2026 1:30 PM

ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನೀತಿ ಖಂಡಿಸಿ ಸಾಗರದಲ್ಲಿ ಬಿಜೆಪಿ ಪ್ರತಿಭಟನೆ: ಹರತಾಳು ಹಾಲಪ್ಪ ಆಕ್ರೋಶ

28/04/2026 1:23 PM

ಧಾರವಾಡದಲ್ಲಿ ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರಿಂದ ಬೆದರಿಕೆ : ಹೆದರಿ ವಿದ್ಯಾರ್ಥಿ ಆತ್ಮಹತ್ಯೆ!

28/04/2026 1:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ MLC ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ
KARNATAKA

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ MLC ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ

By kannadanewsnow0904/03/2026 6:32 PM

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪ್ರಜಾಭತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಿಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕ ವಿಧಾನಮಂಡಲದ ಇಬ್ಬರೂ ವಿರೋಧ ಪಕ್ಷದ ನಾಯಕರು ಅತ್ಯಂತ ವೈಫಲ್ಯದ ನಾಯಕರಾಗಿದ್ದು, ರಾಜ್ಯದ ಸಮಸ್ಯೆಗಳು ಮತ್ತು ಆಡಳಿತದ ಮೇಲೆ ಬೆಳಕು ಚೆಲ್ಲುವ ಬದಲು  ಪದೇ ಪದೇ ತಮ್ಮ ವೈಫಲ್ಯಗಳನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರು 28-01-2026 ರಂದು  ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ  ಇತಿಹಾಸ ಬರೆದಿರುತ್ತಾರೆ. ಈಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಂಡಿರುತ್ತಾರೆ ಎಂಬುದಾಗಿ ಗುಡುಗಿದರು.

ಕಾಂಗ್ರೆಸ್ ಪಕ್ಷದಿಂದ ಎಲ್ಲ ರೀತಿಯ ಬಳುವಳಿಗಳನ್ನು ಪಡೆದುಕೊಂಡು ಮಲ್ಲಿಕಾರ್ಜುನ ಖರ್ಗೆ ರವರ ಕುಟುಂಬವನ್ನು ಟೀಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಅದಕ್ಕಾಗಿಯೇ ಬಿಜೆಪಿಯಲ್ಲಿ ಬಳುವಳಿಯನ್ನು ಪಡೆದುಕೊಂಡಿರುವ ಇವರು ಪ್ರಿಯಾಂಕಾ ಖರ್ಗೆರವರನ್ನು ಟೀಕೆ ಮಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತಾರೆ. ತಲೆ ಮೇಲೆ ಚಡ್ಡಿ ಹೊತ್ತು ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿಯಲ್ಲಿ ಬದುಕುತ್ತಿರುವ ಛಲವಾದಿರವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಜೆಟ್ ಗೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ  ಮತ್ತೊಮ್ಮೆ ಚಡ್ಡಿ ಹೊರುವ ಸಂಸ್ಕೃತಿಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಬಿಜೆಪಿ ಸರ್ಕಾರವು ತನ್ನ ಒಟ್ಟಾರೆ ಬಜೆಟ್ ನಲ್ಲಿ ಶೇಕಡಾ 10 ರಷ್ಟು ಹಣವನ್ನು ಈ ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ  ನೀಡಿರುವುದಿಲ್ಲ. ದಲಿತ ವಿರೋಧಿ ನೀತಿಯನ್ನು ತನ್ನ ಆಡಳಿತದ ಉದ್ದಗಲಕ್ಕೂ ಸಾರುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನಾಗಲಿ ಅಥವಾ ಮೀಸಲಾತಿ ವಿರೋಧಿ ನೀತಿಯನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರವನ್ನಾಗಲಿ  ಪ್ರಶ್ನೆ ಮಾಡುವ ತಾಕತ್ತು, ಧೈರ್ಯ ಅಥವಾ ನೈತಿಕತೆಯನ್ನು ಹೊಂದಿರದ ಛಲವಾದಿ ನಾರಾಯಣಸ್ವಾಮಿ ರವರು, ಧರ್ಮದ ಹೆಸರಿನಲ್ಲಿ ಬೆಂಕಿ ಇಡುವ ಬಿಜೆಪಿ ಪ್ರವೃತ್ತಿಯ ಮುಂದುವರೆದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ಪ್ರತಿಗೆ ಬೆಂಕಿ ಇಡುವ ಮಾತನಾಡಿರುತ್ತಾರೆ ಎಂಬುದಾಗಿ ಹೇಳಿದರು.

ಇಡೀ ದೇಶದಲ್ಲಿ ಎಸ್.ಸಿ.ಪಿ ಮತ್ತು ಎಸ್.ಟಿ.ಪಿ ಯೋಜನೆಯನ್ನು  ಕರ್ನಾಟಕದಲ್ಲಿ ಜಾರಿಗೊಳಿಸಿದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ಅನುಕರಣೆ ಮಾಡಲು ವಿಫಲವಾಗಿರುವ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಇತರೆ ರಾಜ್ಯಗಳ ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳೆಯುತ್ತಿದ್ದಾರೆ. ಬಹುಶ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇದಕ್ಕಿಂತ ಹೆಚ್ಚು ಭಟ್ಟಂಗಿತನ ಪ್ರದರ್ಶನ ಮಾಡಲು ಇವರಿಗೆ ಸಾಧ್ಯವಿಲ್ಲ ಎಂದು ತಿಳಿಸಿದರು.

ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದು, ಸಾರ್ವಜನಿಕವಾಗಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದು ಇವುಗಳು ಛಲವಾದಿ ನಾರಾಯಣಸ್ವಾಮಿ ರವರು ಬಿಜೆಪಿ ಮತ್ತು ಸಂಘ ಪರಿವಾರದಿಂದ ಕಲಿತ ಸಂಸ್ಕೃತಿ ಆಗಿರುತ್ತದೆ. ಇವರಿಗೆ ದಲಿತರ ಬಗ್ಗೆ ಬದ್ದತೆ ಇದ್ದರೆ  ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನಗಳ ಕುರಿತು ಧ್ವನಿಯೆತ್ತಲಿ. ಪುಕ್ಕಟೆ ಪ್ರಚಾರಕ್ಕಾಗಿ ಚಡ್ಡಿ ಹೊರುವ, ಪುಸ್ತಕ ಹರಿಯುವ, ಬೆಂಕಿ ಇಡುವ ನಡತೆಯಿಂದ ಮುಕ್ತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಈ ಮೂಲಕ ಒತ್ತಾಯಿಸಿದರು.

ಈ ಸಲಹೆಗಳನ್ನು ಪಾಲಿಸಿ, ನಿಮ್ಮ ಸಂಗಾತಿಯೊಂದಿಗೆ ದೀರ್ಘಕಾಲಿಕವಾಗಿ ‘ಲೈಂಗಿಕ ಮಿಲನ’ ನಡೆಸಿ

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!

Share. Facebook Twitter LinkedIn WhatsApp Email

Related Posts

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

28/04/2026 1:30 PM1 Min Read

ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನೀತಿ ಖಂಡಿಸಿ ಸಾಗರದಲ್ಲಿ ಬಿಜೆಪಿ ಪ್ರತಿಭಟನೆ: ಹರತಾಳು ಹಾಲಪ್ಪ ಆಕ್ರೋಶ

28/04/2026 1:23 PM2 Mins Read

ಧಾರವಾಡದಲ್ಲಿ ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರಿಂದ ಬೆದರಿಕೆ : ಹೆದರಿ ವಿದ್ಯಾರ್ಥಿ ಆತ್ಮಹತ್ಯೆ!

28/04/2026 1:22 PM1 Min Read
Recent News

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

28/04/2026 1:30 PM

ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನೀತಿ ಖಂಡಿಸಿ ಸಾಗರದಲ್ಲಿ ಬಿಜೆಪಿ ಪ್ರತಿಭಟನೆ: ಹರತಾಳು ಹಾಲಪ್ಪ ಆಕ್ರೋಶ

28/04/2026 1:23 PM

ಧಾರವಾಡದಲ್ಲಿ ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರಿಂದ ಬೆದರಿಕೆ : ಹೆದರಿ ವಿದ್ಯಾರ್ಥಿ ಆತ್ಮಹತ್ಯೆ!

28/04/2026 1:22 PM

BIG NEWS : `RTE’ ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ರಿಲೀಫ್ : ಸಾಫ್ಟ್‌ ವೇರ್‌ ನಲ್ಲಿ ‘ವಿಳಾಸ ವ್ಯತ್ಯಾಸ’ ಅಪ್‌ಡೇಟ್ ಗೆ ಆದೇಶ.!

28/04/2026 1:19 PM
State News
KARNATAKA

ALERT : ಫಿಶ್ ಪ್ರಿಯರೇ ಎಚ್ಚರ : ಮೀನಿನ ಜೊತೆ ಈ ಆಹಾರ ತಿಂದರೆ `ಬಿಳಿ ತೊನ್ನು’ ಗ್ಯಾರಂಟಿ.!

By kannadanewsnow5728/04/2026 1:30 PM KARNATAKA 1 Min Read

ಮೀನು ಪ್ರೋಟೀನ್ ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳ ಆಗರ. ಆದರೆ ಆಯುರ್ವೇದ ಮತ್ತು ಆಧುನಿಕ ಆಹಾರ ವಿಜ್ಞಾನದ ಪ್ರಕಾರ, ಕೆಲವು…

ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನೀತಿ ಖಂಡಿಸಿ ಸಾಗರದಲ್ಲಿ ಬಿಜೆಪಿ ಪ್ರತಿಭಟನೆ: ಹರತಾಳು ಹಾಲಪ್ಪ ಆಕ್ರೋಶ

28/04/2026 1:23 PM

ಧಾರವಾಡದಲ್ಲಿ ಗಾಂಜಾ ಸೇವಿಸದಿದ್ದರೂ ಕೂಡ ಕೇಸ್ ಹಾಕುವುದಾಗಿ ಪೊಲೀಸರಿಂದ ಬೆದರಿಕೆ : ಹೆದರಿ ವಿದ್ಯಾರ್ಥಿ ಆತ್ಮಹತ್ಯೆ!

28/04/2026 1:22 PM

BIG NEWS : `RTE’ ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ರಿಲೀಫ್ : ಸಾಫ್ಟ್‌ ವೇರ್‌ ನಲ್ಲಿ ‘ವಿಳಾಸ ವ್ಯತ್ಯಾಸ’ ಅಪ್‌ಡೇಟ್ ಗೆ ಆದೇಶ.!

28/04/2026 1:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.