ಉತ್ತರ ಕನ್ನಡ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೇರಿಕಾ ಯುದ್ಧ ಸಾರಿದ್ದಾವೆ. ಇರಾನ್ ನಲ್ಲಿನ ಹಲವು ಪ್ರದೇಶಗಳನ್ನು ಕ್ಷಿಪಣಿ, ಡ್ರೋನ್ ದಾಳಿ ನಡೆಸಿ ನಾಶಗೊಳಿಸಿದ್ದಾವೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ತೈಲ ದರ ಹೆಚ್ಚಾಗಲಿದೆ ಎನ್ನುವಂತ ವದಂತಿ ಹಬ್ಬಿದೆ. ಹೀಗಾಗಿ ಸುದ್ದಿ ವೈರಲ್ ಆಗುತ್ತಿದ್ದಂತೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಖರೀದಿಗಾಗಿ ಮುಗಿ ಬಿದ್ದಿದ್ದಾರೆ.
ಇರಾನ್ ಮೇಲೆ ಇಸ್ರೇಲ್-ಅಮೇರಿಕಾದಿಂದ ದಾಳಿ ನಡೆಸಲಾಗುತ್ತಿದೆ. ಯುದ್ಧದಿಂದ ತೈಲ ದರ ಹೆಚ್ಚಾಗುತ್ತದೆ ಎನ್ನುವಂತ ವದಂತಿ ಹಬ್ಬಿದೆ. ಈ ಸುಳ್ಳು ಸುದ್ದಿಯನ್ನು ನಂಬಿದಂತ ಜನರು, ಪೆಟ್ರೋಲ್, ಡೀಸೆಲ್ ಖರೀದಿಗಾಗಿ ನಾಮುಂದು, ತಾಮುಂದು ಎನ್ನುವಂತೆ ಮುಗಿ ಬಿದ್ದಿರುವಂತ ಘಟನೆ ಭಟ್ಕಳದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪೆಟ್ರೋಲ್ ಖರೀದಿಗಾಗಿ ನೂಕು ನುಗ್ಗಲು ಉಂಟಾಗಿದೆ. ಭಟ್ಕಳದ ಕೆಲ ಬಂಕ್ ಗಳಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದೆ. ಭಟ್ಕಳದಲ್ಲಿ ಪೆಟ್ರೋಲ್ ಸಿಗದಿದ್ದಕ್ಕೆ ಹೊನ್ನಾವರ ಹಾಗೂ ಕುಂದಾಪುರಕ್ಕೆ ತೆರಳಿ ಪೆಟ್ರೋಲ್ ಅನ್ನು ಜನರು ಖರೀದಿಸುತ್ತಿದ್ದಾರೆ.
ರಾಜ್ಯದ ಪತ್ರಕರ್ತೆಯರ ಗಮನಕ್ಕೆ: ಉಚಿತ ಡಿಜಿಟಲ್ ಮಾಧ್ಯಮ, ಎಐ ಬಳಕೆ ತರಬೇತಿಗೆ ಅರ್ಜಿ ಆಹ್ವಾನ
SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!








