ಬಿಹಾರ್ : ಬಿಹಾರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಪೂರ್ವ ಚಂಪಾರಣ್ ಜಿಲ್ಲೆಯ ಗ್ರಾಮವೊಂದರಲ್ಲಿ ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಐವರು ಬಾಲಕಿಯರು ಸೇರಿ ಆರು ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ದೀಕ್ಷಾ ಕುಮಾರಿ(12), ಆರಾಯಾಧ್ಯ ಕುಮಾರಿ(11), ಚೋಟಿ ಕುಮಾರಿ(8), ಸೋನಾಕ್ಷಿ ಕುಮಾರಿ(9), ಪ್ರಿಯಾ ಕುಮಾರಿ(7) ಹಾಗೂ ಪ್ರಿನ್ಸ್ ಕುಮಾರ್(11) ಎಂದು ಗುರುತಿಸಲಾಗಿದೆ.ಪೂರ್ವ ಚಂಪಾರಣ್ ಜಿಲ್ಲೆಯ ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.
ಸ್ನಾನ ಮಾಡಲು ಓರ್ವ ಬಾಲಕಿ ಮೊದಲು ಹೊಂಡಕ್ಕೆ ಇಳಿದು ಮುಳುಗಿದಾಗ, ಆಕೆಯನ್ನು ಕಾಪಾಡಲು ಉಳಿದ ಬಾಲಕಿಯರು ಸಹ ನೀರಿ ಹಾರಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.








