ನೀವು ಹಳೆಯ ನಾಣ್ಯ ಅಥವಾ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ನಿಮ್ಮ ಬಳಿ ಇರುವ ಕೇವಲ ಮೂರು ಹಳೆಯ 100 ರೂಪಾಯಿ ನೋಟುಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು! ಹೌದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ನೋಟುಗಳಿಗೆ ಭಾರಿ ಬೇಡಿಕೆಯಿದ್ದು, ಜನರು ಲಕ್ಷಾಂತರ ರೂಪಾಯಿ ನೀಡಲು ಸಿದ್ಧರಿದ್ದಾರೆ.
ಯಾವ ನೋಟುಗಳಿಗೆ ಇಷ್ಟೊಂದು ಬೆಲೆ?
ಎಲ್ಲಾ 100 ರೂಪಾಯಿ ನೋಟುಗಳು ಇಷ್ಟು ಬೆಲೆ ಬಾಳುವುದಿಲ್ಲ. ನಿಮ್ಮ ಬಳಿ ಇರುವ ನೋಟು ಈ ಕೆಳಗಿನ ವಿಶೇಷತೆಗಳನ್ನು ಹೊಂದಿರಬೇಕು:
ಸರಣಿ ಸಂಖ್ಯೆ 786: ನೋಟಿನ ಮೇಲೆ ಎಲ್ಲಿಯಾದರೂ ‘786’ ಎಂಬ ಸಂಖ್ಯೆ ಇರಬೇಕು. ಇದನ್ನು ಅನೇಕರು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.
ಗವರ್ನರ್ ಸಹಿ: ಮಾಜಿ ಗವರ್ನರ್ ಆಗಿರುವ ಬಿ. ರಾಮರಾವ್ ಅಥವಾ ಇತ್ತೀಚಿನ ಅಪರೂಪದ ಗವರ್ನರ್ ಗಳ ಸಹಿ ಇರುವ ನೋಟುಗಳಿಗೆ ಹೆಚ್ಚಿನ ಮೌಲ್ಯವಿದೆ.
ವಿಶೇಷ ವಿನ್ಯಾಸ: ಹಳೆಯ ಕೃಷಿ ಅಥವಾ ಐತಿಹಾಸಿಕ ಚಿತ್ರಗಳಿರುವ ಹಳೆಯ ಮಾದರಿಯ 100 ರೂ. ನೋಟುಗಳಿರಬೇಕು.
ಮಾರಾಟ ಮಾಡುವ ಸರಳ ಪ್ರಕ್ರಿಯೆ ಇಲ್ಲಿದೆ:
ಈ ನೋಟುಗಳನ್ನು ಮಾರಾಟ ಮಾಡಲು ನೀವು ಎಲ್ಲಿಯೂ ಅಲೆಯಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಮಾರಾಟ ಮಾಡಬಹುದು: ಮೊದಲು ‘eBay’, ‘Coinbazzar’ ಅಥವಾ ‘Quikr’ ನಂತಹ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ.ಈ ತಾಣಗಳಲ್ಲಿ ನೀವು ‘ಮಾರಾಟಗಾರ’ (Seller) ಆಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಫೋಟೋ ಅಪ್ಲೋಡ್ ಮಾಡಿ: ನಿಮ್ಮ ಬಳಿ ಇರುವ ವಿಶೇಷ ನೋಟಿನ ಎರಡು ಬದಿಯ ಸ್ಪಷ್ಟ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಿ.
ದರ ನಿಗದಿಪಡಿಸಿ: ನೀವು ನಿರೀಕ್ಷಿಸುವ ಮೊತ್ತವನ್ನು ಅಲ್ಲಿ ನಮೂದಿಸಿ.
ಗ್ರಾಹಕರ ಸಂಪರ್ಕ: ನಿಮ್ಮ ನೋಟು ಇಷ್ಟವಾದಲ್ಲಿ ಆಸಕ್ತ ಗ್ರಾಹಕರು ನೇರವಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತುಕತೆ ನಡೆಸಿ ಉತ್ತಮ ದರಕ್ಕೆ ಮಾರಾಟ ಮಾಡಬಹುದು.








