ಬೆಂಗಳೂರು: ಯುದ್ಧಪೀಡಿದ ಪ್ರದೇಶದಿಂದ ಮತ್ತೊಂದು ಬ್ಯಾಚ್ ನಲ್ಲಿ 490 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ಮುಂಜಾನೆ 490 ಮಂದಿ ಆಗಮಿಸಿದ್ದರು, ಇದೀಗ 2ನೇ ವಿಮಾನದಲ್ಲಿ ದುಬೈನಿಂದ ಬೆಂಗಳೂರಿಗೆ 350 ಕನ್ನಡಿಗರು ವಾಪಾಸ್ ಆಗಿದ್ದಾರೆ.
ಯುದ್ಧ ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ಕನ್ನಡಿಗರು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ದುಬೈ ಏರ್ ಪೋರ್ಟ್ ನಿಂದ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಗೆ ಸುರಕ್ಷಿತವಾಗಿ 350 ಕನ್ನಡಿಗರು ಬಂದಿಳಿದಿದ್ದಾರೆ. ಇಕೆ-566 ಎಮಿರೇಟ್ಸ್ ವಿಮಾನದ ಮೂಲಕ 350 ಕನ್ನಡಿಗರು ಬೆಂಗಳೂರಿಗೆ ಮರಳಿದ್ದಾರೆ.
ಇಂದು ಮುಂಜಾನೆ ದುಬೈನಿಂದ ಮೊದಲ ವಿಮಾನದಲ್ಲಿ 490 ಜನರು ಬೆಂಗಳೂರಿಗೆ ಯುದ್ಧ ಪೀಡಿತ ಪ್ರದೇಶಗಳಿಂದ ವಾಪಾಸ್ ಆಗಿದ್ದರು. ಆ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ದುಬೈನಿಂದ ಹೊರಟಿದ್ದಂತ 2ನೇ ವಿಮಾನವು ಇದೀಗ ಬೆಂಗಳೂರನ್ನು ತಲುಪಿದ್ದು, 350 ಮಂದಿ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. ಕಳೆದ ನಿನ್ನೆ ರಾತ್ರಿ ಅಬುಧಾಬಿಯಿಂದ 213 ಪ್ರಯಾಣಿಕರು ಆಗಮಿಸಿದ್ದರು. ಇದುವರೆಗೆ 1,053 ಪ್ರಯಾಣಿಕರು ಸುರಕ್ಷಿತವಾಗಿ ವಾಪಾಸ್ ಆದಂತೆ ಆಗಿದೆ.
ರಾಜ್ಯದ ಪೋಷಕರಿಗೆ ಶಾಕ್: ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಏರಿಕೆ; ಶೇ.15ರಷ್ಟು ಹೆಚ್ಚಳಕ್ಕೆ ಚಿಂತನೆ!
‘ಮಗುವಿನ ದೇಹದ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಅತಿಕ್ರಮಣ ಅತ್ಯಾಚಾರ’: ಕೇರಳ ಹೈಕೋರ್ಟ್ ಮಹತ್ವದ ತೀರ್ಪು








